ಬಳಕೆದಾರರ ಮಾಹಿತಿಯನ್ನು ಫೇಸ್ಬುಕ್ ಜೊತೆ ಹಂಚಿಕೊಳ್ಳುವ ವಾಟ್ಸಾಪ್ ನಿರ್ಧಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಸಾಕಷ್ಟು ಬಳಕೆದಾರರು ವಾಟ್ಸಾಪ್ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ಸಿಗ್ನಲ್ ಆ್ಯಪ್ನತ್ತ ಮುಖ ಮಾಡುತ್ತಿದ್ದಾರೆ. ಹಾಗಾದರೆ, ಯಾವ ಆ್ಯಪ್ ಉತ್ತಮ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ವಾಟ್ಸಾಪ್ ಬಳಕೆದಾರರಿಗೆ ಮಂಗಳವಾರ (ಜನವರಿ 05) ನೋಟಿಫಿಕೇಷನ್ ಬಂದಿತ್ತು. ಈ ನೋಟಿಫಿಕೇಷ್ನಲ್ಲಿ ಬದಲಾದ ಪಾಲಿಸಿ ಬಗ್ಗೆ ವಿವರಿಸಲಾಗಿತ್ತು. ಹೊಸ ನಿಯಮಗಳನ್ನು ಒಪ್ಪಿ (Accept) ಅಥವಾ ನಂತರ ಒಪ್ಪಿ (Accept later) ಎನ್ನುವ ಆಯ್ಕೆ ನೀಡಲಾಗಿತ್ತು. ನಿಮಗೆ ಹೊಸ ನೀತಿ ಒಪ್ಪಿಕೊಳ್ಳಲು ಫೆಬ್ರವರಿ 8ರವರೆಗೆ ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾದರೆ, ವಾಟ್ಸಾಪ್ ಯಾವ ಮಾಹಿತಿ ಕದಿಯಲಿದೆ? ಯಾವ ಆ್ಯಪ್ ಬಳಕೆ ಹೆಚ್ಚು ಸುರಕ್ಷಿತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ವಾಟ್ಸಾಪ್:
ವಾಟ್ಸಾಪ್ ಹೊಸ ನಿಯಮದ ಪ್ರಕಾರ ನಿಮ್ಮ ಮೊಬೈಲ್ ಅಥವಾ ಟ್ಯಾಬ್ನ ಐಡಿಯನ್ನು ವಾಟ್ಸಾಪ್ ಫೇಸ್ಬುಕ್ಗೆ ನೀಡುವ ಅವಕಾಶ ಇರಲಿದೆ. ಇನ್ನು, ನಿಮ್ಮ ಮೊಬೈಲ್ ಬಳಕೆ ಮಾಡಿಕೊಂಡುನೀವು ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿರುತ್ತೀರಿ. ಇದರ ಮಾಹಿತಿಯನ್ನು ವಾಟ್ಸಾಪ್ ಪಡೆದುಕೊಳ್ಳಲಿದೆ. ಇನ್ನು, ನಿಮ್ಮ ಲೊಕೇಷನ್, ದೂರವಾಣಿ ಸಂಖ್ಯೆ, ವಾಣಿಜ್ಯ ವ್ಯವಹಾರ, ಇಮೇಲ್ ಅಡ್ರೆಸ್ ಹಾಗೂ ನಿಮ್ಮಲಿರುವ ಕಾಂಟ್ಯಾಕ್ಟ್ ಮಾಹಿತಿಯನ್ನು ವಾಟ್ಸಾಪ್ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಜತೆ ಹಂಚಿಕೊಳ್ಳಬಹುದು.
ಟೆಲಿಗ್ರಾಂ
ಮೆಸೆಂಜರ್ ಆ್ಯಪ್ ಆಗಿ ಮಾರುಕಟ್ಟೆಗೆ ಬಂದಿದ್ದ ಟೆಲಿಗ್ರಾಂ ಇತ್ತೀಚೆಗೆ ವಾಣಿಜ್ಯ ಹಾಗೂ ಪೈರಸಿ ಸಿನಿಮಾ ಡೌನ್ಲೋಡ್ ಮಾಡಿಕೊಳ್ಳಲು ಹೆಚ್ಚು ಬಳಕೆ ಆಗುತ್ತಿದೆ. ಹೀಗಾಗಿ, ಇದರ ಬಳಕೆಗೆ ಸಾಕಷ್ಟು ವಿರೋಧ ಕೂಡ ಇದೆ. ಆದರೆ, ವಾಟ್ಸಾಪ್ಗೆ ಹೋಲಿಕೆ ಮಾಡಿದರೆ ಇದು ಹೆಚ್ಚು ಸುರಕ್ಷಿತ. ಏಕೆಂದರೆ ಟೆಲಿಗ್ರಾಂ ಕೇವಲ ನಿಮ್ಮ ಸಂಪರ್ಕ ಮಾಹಿತಿ, ಯೂಸರ್ ಐಡಿ ಹಾಗೂ ಕಾಂಟ್ಯಾಕ್ಟ್ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತದೆ.
ಸಿಗ್ನಲ್
ಸಿಗ್ನಲ್ ಆ್ಯಪ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಿಟ್ಟು ಮತ್ತಾವುದೇ ಮಾಹಿತಿಯೂ ಸಂಗ್ರಹವಾಗಿರುವುದಿಲ್ಲ. ಈ ಕಾರಣಕ್ಕೆ ಸಿಗ್ನಲ್ ಹೆಚ್ಚು ಜನಪ್ರಿಯವಾಗುತ್ತಿದೆ. ಸಿಗ್ನಲ್ ಆ್ಯಪ್ ಕೋಡ್ ಓಪನ್ ಸೋರ್ಸ್. ಅಂದರೆ, ಯಾರ ಬೇಕಾದರೂ ಈ ಆ್ಯಪ್ನಲ್ಲಿ ಏನಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ, ವಾಟ್ಸಾಪ್ನಲ್ಲಿ ಇದು ಸಾಧ್ಯವಿಲ್ಲ.
WhatsApp ಬದಲಿಗೆ ಜನರು Signal ಆ್ಯಪ್ ಬಳಸ್ತಿರೋದೆಕೆ?: ಇಲ್ಲಿದೆ ವಿವರ