ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ

|

Updated on: May 03, 2024 | 4:46 PM

ಚಲಿಸುತ್ತಿರುವ ರೈಲಿನಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಶಾಕ್​​ಗೆ ಒಳಗಾದ ಪತ್ನಿ ಅಫ್ಸಾನಾ ಸರ್ಕಾರಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ಆಕೆಯ ಪತಿಯ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ
ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ
Follow us on

ಉತ್ತರಪ್ರದೇಶ: ಚಲಿಸುತ್ತಿರುವ ರೈಲಿನಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಆದರೆ ಇದಕ್ಕೆ ಒಪ್ಪಂದ ಪತ್ನಿಯನ್ನು ಪ್ರಯಾಣಿಕರ ಮುಂದೆಯೇ ಥಳಿಸಿ ಪರಾರಿಯಾಗಿದ್ದಾನೆ. ಏಪ್ರಿಲ್‌ 29ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊನೆಗೂ ಪತಿಯ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮೊಹಮ್ಮದ್ ಅರ್ಷದ್ (28) ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಝಾನ್ಸಿ ಜಂಕ್ಷನ್‌ಗೆ ಸ್ವಲ್ಪ ಮೊದಲು ಈ ಘಟನೆ ಸಂಭವಿಸಿದೆ. ರೈಲು ಝಾನ್ಸಿ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿ ರೈಲಿನಿಂದ ಇಳಿದಿದ್ದಾನೆ. ಪರಾರಿಯಾಗುವ ಮುನ್ನ ಪತ್ನಿಗೆ ಥಳಿಸಿ ಓಡಿ ಹೋಗಿದ್ದಾನೆ. ಘಟನೆಗಳ ಹಠಾತ್ ತಿರುವಿನಿಂದ ಆಘಾತಕ್ಕೊಳಗಾದ ಅಫ್ಸಾನಾ ಸರ್ಕಾರಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದು, ಆಕೆಯ ಪತಿಯ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.

ಭೋಪಾಲ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಕಂಪ್ಯೂಟರ್ ಎಂಜಿನಿಯರ್ ಅರ್ಷದ್, ಈ ವರ್ಷ ಜನವರಿ 12 ರಂದು ರಾಜಸ್ಥಾನದ ಕೋಟಾ ಮೂಲದ ಪದವೀಧರ ಅಫ್ಸಾನಾ ಅವರನ್ನು ವಿವಾಹವಾಗಿದ್ದರು. ಕಳೆದ ವಾರ ದಂಪತಿಗಳು ಪುಖ್ರಾಯನ್‌ನಲ್ಲಿರುವ ಅರ್ಷದ್ ಅವರ ಸಂಬಂಧಿಕರ ಮನೆಗೆ ಭೇಟಿ ನೀಡಿದಾಗ,  ಅರ್ಷದ್ ಈಗಾಗಲೇ ಮದುವೆಯಾಗಿರುವುದನ್ನು ಕಂಡು ಅಫ್ಸಾನಾ ಆಘಾತಕ್ಕೊಳಗಾಗಿದ್ದರು.ಆಕೆ ಆತನನ್ನು ಎದುರಿಸಿದಾಗ, ಅವನು ಮತ್ತು ಅವನ ತಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದೇಶ ಸೇವೆಯೇ ಈಶ ಸೇವೆ; ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾದ ಸೈನಿಕ

ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಅಫ್ಸಾನಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಸಹಾಯ ಮಾಡುವಂತೆ ಮತ್ತು ಮಹಿಳೆಯರಿಗೆ ತ್ರಿವಳಿ ತಲಾಖ್​​ ರೀತಿಯಲ್ಲಿ ವಿಚ್ಛೇದನ ನೀಡುವ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಅರ್ಷದ್, ಅವರ ತಾಯಿಯ ಚಿಕ್ಕಪ್ಪ ಅಖೀಲ್, ತಂದೆ ನಫೀಸುಲ್ ಹಸನ್ ಮತ್ತು ತಾಯಿ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ (ಸಿಒ) ಪ್ರಿಯಾ ಸಿಂಗ್ ತಿಳಿಸಿದ್ದಾರೆ.ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಒ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Fri, 3 May 24