Ants: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ

ಇರುವೆಗಳು ಒಂದರ ಹಿಂದೆ ಒಂದರಂತೆ ಸಾಲಿನಲ್ಲಿ ಓಡಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಈ ರೀತಿ ಓಡಾಡುವುದರ ಹಿಂದೆ ಕಾರಣವಿದೆ. ಇರುವೆಗಳು ಆಹಾರವನ್ನು ಹುಡುಕಿಕೊಂಡು ಹೊರಟ ಸಂದರ್ಭದಲ್ಲಿ ಇರುವೆಗಳು ಫೆರೋಮೋನ್ಸ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಹೀಗಾದಾಗ ಉಳಿದ ಇರುವೆಗಳು ಫೆರೋಮೋನ್ಸ್ ರಾಸಾಯನಿಕದ ವಾಸನೆಯಿಂದಾಗಿ ಗೂಡಿನಿಂದ ಹೊರ ಬಂದ ಇರುವೆಯನ್ನು ಅನುಸರಿಸುತ್ತವೆ.

Ants: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ
ಸಾಂದರ್ಭಿಕ ಚಿತ್ರ
Image Credit source: Flickr

Updated on: Jul 24, 2026 | 7:10 PM

ಮುಖ್ಯಾಂಶಗಳು

  • ಇರುವೆಗಳು ಒಂದರ ಒಂದರಂತೆ ಸಾಲಾಗಿ ಚಲಿಸುವುದರ ಹಿಂದೆ ಕಾರಣವಿದೆ
  • ಇರುವೆಗಳು ಫೆರೋಮೋನ್ಸ್ ರಾಸಾಯನಿಕ ಅಂಶ ಬಿಡುಗಡೆ ಮಾಡುತ್ತವೆ
  • ಈ ರಾಸಾಯನಿಕವನ್ನು ಗ್ರಹಿಸುವ ಇರುವೆಗಳು ಸಾಲಾಗಿ ಒಂದರ ಹಿಂದೆ ಒಂದು ಸಾಗುತ್ತವೆ.

ಮನೆಯಲ್ಲಿ ಸಿಹಿತಿಂಡಿ (sweets) ಏನಾದ್ರೂ ಕಂಡ್ರೆ ಇರುವೆಗಳು (Ants) ಮುತ್ತಿಕೊಳ್ಳುತ್ತವೆ. ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಸಾಲುಗಟ್ಟಿ ಅತ್ತಿಂದ ಇತ್ತ ಓಡಾಡುವುದನ್ನು ನೀವು ನೋಡುತ್ತೀರಿ. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳಿಗೆ ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುತ್ತವೆ. ಆದರೆ ನೀವು ಇರುವೆಗಳು ಸಾಲಾಗಿ ಯಾಕೆ ಓಡಾಡುತ್ತವೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ. ಇದಕ್ಕೆ ಕಾರಣ ಇರುವೆಗಳು ಬಿಡುಗಡೆ ಮಾಡುವ ಫೆರೋಮೋನ್ಸ್ ಎಂಬ ರಾಸಾಯನಿಕ ಅಂಶ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇರುವೆಗಳು ಸಾಲಿನಲ್ಲಿ ಚಲಿಸುವುದು ಏಕೆ?

ಇರುವೆ ತನ್ನ ಗೂಡಿನಿಂದ ಹೊರಬಂದಾಗ ಫೆರೋಮೋನ್ಸ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಈ ರಾಸಾಯನಿಕವು ಒಂದು ರೀತಿಯ ವಾಸನೆಯ ರೂಪದಲ್ಲಿರುತ್ತದೆ. ಇದನ್ನು ಗ್ರಹಿಸುವ ಇರುವೆಗಳು ಸಾಲಾಗಿ ಒಂದರ ಹಿಂದೆ ಒಂದು ಸಾಗುತ್ತವೆ.

ಇದನ್ನೂ ಓದಿ: ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಹಸಿವು ನೀಗಿಸಿದ ಮಹಿಳೆ

ಹೌದು, ಈ ಇರುವೆಗಳಿಗೆ ಕಣ್ಣಿನ ದೃಷ್ಟಿ ತುಂಬಾ ಕಡಿಮೆ. ಹೀಗಾಗಿ ಆಂಟೆನಾ ಮುಖಾಂತರ ವಾಸನೆ ಗ್ರಹಿಸಿ ಹಾಗೂ ಒಂದಕ್ಕೊಂದು ಸ್ಪರ್ಶಿಸಿಕೊಂಡು ಸೂಚನೆ ನೀಡುತ್ತಾ ಒಂದೇ ಸಾಲಿನಲ್ಲಿ ಸಾಗುತ್ತವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Fri, 24 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us