ಕ್ಯಾಂಡಿ ಕ್ರಷ್‌ನಲ್ಲಿ 22,222ನೇ ಲೆವೆಲ್ ತಲುಪಿ ವಿಶ್ವ ದಾಖಲೆ ಬರೆದ 19 ವರ್ಷದ ಬಿಹಾರದ ಯುವಕ!

ಬಿಹಾರದ 19 ವರ್ಷದ ಶುಭಂ ಕುಮಾರ್ ಕ್ಯಾಂಡಿ ಕ್ರಶ್ ಗೇಮ್​​ನಲ್ಲಿ 22,222ನೇ ಹಂತ ತಲುಪಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಗುರುತಿಸಲ್ಪಟ್ಟಿದೆ. ಕ್ಯಾಂಡಿ ಕ್ರಷ್ ಸಾಗಾ ಆಟದ ಹಂತಗಳು ಮುಂದುವರಿದಂತೆ ಸವಾಲು ಮತ್ತು ಕಷ್ಟದ ಮಟ್ಟವೂ ಹೆಚ್ಚಾಗುತ್ತದೆ. ಹೀಗಾಗಿ 22,222ನೇ ಲೆವೆಲ್‌ವರೆಗೆ ತಲುಪುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಶುಭಂ ಅವರ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುವಂತಾಗಿದೆ.

ಕ್ಯಾಂಡಿ ಕ್ರಷ್‌ನಲ್ಲಿ 22,222ನೇ ಲೆವೆಲ್ ತಲುಪಿ ವಿಶ್ವ ದಾಖಲೆ ಬರೆದ 19 ವರ್ಷದ ಬಿಹಾರದ ಯುವಕ!
ಕ್ಯಾಂಡಿ ಕ್ರಷ್‌ನಲ್ಲಿ ವಿಶ್ವ ದಾಖಲೆ

Updated on: Oct 07, 2026 | 12:06 PM

ಮೊಬೈಲ್ ಗೇಮ್‌ಗಳನ್ನು ಕೇವಲ ಮನರಂಜನೆಗಾಗಿ ಆಡುವವರೇ ಹೆಚ್ಚು. ಆದರೆ ಬಿಹಾರದ 19 ವರ್ಷದ ಯುವಕನೊಬ್ಬ ಇದೇ ಗೇಮ್‌ನಲ್ಲಿ ಅಪರೂಪದ ಮೈಲಿಗಲ್ಲು ಸಾಧಿಸಿ ಗಮನ ಸೆಳೆದಿದ್ದಾರೆ. ಜನಪ್ರಿಯ ಮೊಬೈಲ್ ಗೇಮ್ ‘ಕ್ಯಾಂಡಿ ಕ್ರಷ್ ಸಾಗ’ ದಲ್ಲಿ ಬರೋಬ್ಬರಿ 22,222ನೇ ಲೆವೆಲ್ ತಲುಪುವ ಮೂಲಕ ಬಿಹಾರದ ಶುಭಂ ಕುಮಾರ್ ಅವರು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.

ಕ್ಯಾಂಡಿ ಕ್ರಷ್‌ನಲ್ಲಿ ಶುಭಂ ಕುಮಾರ್ ಅಪರೂಪದ ಸಾಧನೆ:

ಬಿಹಾರದ ದಿಗವಾರಾ ಮೂಲದ 19 ವರ್ಷದ ಶುಭಂ ಕುಮಾರ್ ಅವರು ಕ್ಯಾಂಡಿ ಕ್ರಷ್ ಸಾಗದಲ್ಲಿ ಅತ್ಯಂತ ಹೆಚ್ಚಿನ ಹಂತ ತಲುಪಿದ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘Highest Level Achieved in Candy Crush Saga – Teenager’ ಎಂಬ ವಿಭಾಗದಲ್ಲಿ ಶುಭಂ ಅವರ ಈ ಸಾಧನೆಯನ್ನು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, 2026ರ ಜುಲೈ 5ರಂದು ತಮ್ಮ 19ನೇ ವಯಸ್ಸಿನಲ್ಲಿ ಶುಭಂ ಈ ಸಾಧನೆ ಮಾಡಿದ್ದಾರೆ.

22,222ನೇ ಲೆವೆಲ್ ತಲುಪುವುದು ಅಷ್ಟು ಸುಲಭವಲ್ಲ:

ಕ್ಯಾಂಡಿ ಕ್ರಷ್ ಸಾಗಾ ವಿಶ್ವದಾದ್ಯಂತ ಜನಪ್ರಿಯವಾಗಿರುವ ಪಜಲ್ ಗೇಮ್‌ಗಳಲ್ಲಿ ಒಂದಾಗಿದೆ. ಆಟಗಾರರು ಒಂದೇ ಬಣ್ಣದ ಕ್ಯಾಂಡಿಗಳನ್ನು ಜೋಡಿಸಿ ನಿರ್ದಿಷ್ಟ ಗುರಿಗಳನ್ನು ಪೂರ್ಣಗೊಳಿಸುವ ಮೂಲಕ ಒಂದೊಂದೇ ಹಂತವನ್ನು ದಾಟಬೇಕು. ಆಟದ ಹಂತಗಳು ಮುಂದುವರಿದಂತೆ ಸವಾಲು ಮತ್ತು ಕಷ್ಟದ ಮಟ್ಟವೂ ಹೆಚ್ಚಾಗುತ್ತದೆ. ಹೀಗಾಗಿ 22,222ನೇ ಲೆವೆಲ್‌ವರೆಗೆ ತಲುಪಲು ನಿರಂತರ ಅಭ್ಯಾಸ, ತಾಳ್ಮೆ ಮತ್ತು ಏಕಾಗ್ರತೆ ಅಗತ್ಯ. ಇದೇ ಕಾರಣಕ್ಕೆ ಶುಭಂ ಅವರ ಸಾಧನೆ ಗಮನ ಸೆಳೆಯುತ್ತಿದೆ.

ಓದು, ವೈಯಕ್ತಿಕ ಆಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ:

ಸಾಮಾನ್ಯವಾಗಿ ಯುವಕರ ಸಾಧನೆಗಳನ್ನು ಶೈಕ್ಷಣಿಕ ಅಂಕಗಳು, ಪರೀಕ್ಷಾ ಫಲಿತಾಂಶಗಳು, ಕ್ರೀಡೆ ಅಥವಾ ವೃತ್ತಿಜೀವನದ ಸಾಧನೆಗಳ ಮೂಲಕ ಗುರುತಿಸಲಾಗುತ್ತದೆ. ಆದರೆ ಶುಭಂ ಕುಮಾರ್ ಅವರ ಸಾಧನೆ ವಿಭಿನ್ನ ಆಸಕ್ತಿಯ ಕ್ಷೇತ್ರದಲ್ಲಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಅವರ ಶಾಲೆ, ಕಾಲೇಜು, ಶೈಕ್ಷಣಿಕ ಹಿನ್ನೆಲೆ ಅಥವಾ ಈ ಸಾಧನೆಗಾಗಿ ಅವರು ಪ್ರತಿದಿನ ಎಷ್ಟು ಸಮಯ ಗೇಮ್ ಆಡುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.

ಇದನ್ನೂ ಓದಿ: ಸಾಕು ನಾಯಿ ಸಾವು: ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿ 2 ಲಕ್ಷ ರೂ. ವೆಚ್ಚದಲ್ಲಿ ಸಮಾಧಿ ನಿರ್ಮಿಸಿದ ಕುಟುಂಬ

ಆಸಕ್ತಿಯ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂಬ ಸಂದೇಶ:

ಮೊಬೈಲ್ ಗೇಮಿಂಗ್‌ ಅನ್ನು ಶೈಕ್ಷಣಿಕ ಪ್ರತಿಭೆಗೆ ನೇರ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿ ಅದನ್ನು ತಲುಪುವವರೆಗೆ ನಿರಂತರವಾಗಿ ಪ್ರಯತ್ನಿಸುವುದು ಶುಭಂ ಅವರ ಸಾಧನೆಯ ಪ್ರಮುಖ ಅಂಶವಾಗಿದೆ. ಕೇವಲ ಪಠ್ಯಪುಸ್ತಕ ಅಥವಾ ಪರೀಕ್ಷೆಯ ಅಂಕಗಳಲ್ಲದೆ, ಯುವಕರ ವೈಯಕ್ತಿಕ ಆಸಕ್ತಿ ಮತ್ತು ಕೌಶಲ್ಯಗಳಲ್ಲೂ ವಿಭಿನ್ನ ಸಾಧನೆಗಳಿಗೆ ಅವಕಾಶವಿದೆ ಎಂಬುದಕ್ಕೆ ಶುಭಂ ಕುಮಾರ್ ಅವರ ಈ ದಾಖಲೆ ಒಂದು ಉದಾಹರಣೆಯಾಗಿದೆ.

19ನೇ ವಯಸ್ಸಿನಲ್ಲಿ ಕ್ಯಾಂಡಿ ಕ್ರಷ್‌ನ 22,222ನೇ ಹಂತ ತಲುಪಿ ಅಂತಾರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಶುಭಂ ಅವರ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುವಂತಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us