ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ಕೊಟ್ಟ ತಾಯಿ, ಮಗಳ ಪರದಾಟ ನೋಡಿ

ಮೊದಲೆಲ್ಲಾ ಪೋಷಕರು ಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನು ವಹಿಸಿ ಕೆಲಸ ಕಲಿಸುತ್ತಿದ್ದರು. ಗಂಡಸರು ಹೊರಗೆ ಹೋಗಿ ದುಡಿದುಕೊಂಡು ಬರಬೇಕು ಹೆಣ್ಣುಮಕ್ಕಳು ಮನೆಯನ್ನು ನಿಭಾಯಿಸಬೇಕು ಎನ್ನುವ ಮನಸ್ಥಿತಿ ಇತ್ತು. ಹಾಗಾಗಿ ಹೆಣ್ಣುಮಕ್ಕಳಿಗೆ ಚಿಕ್ಕವಿರುವಾಗಲೇ ಅಡುಗೆ, ಮನೆಯ ಕೆಲಸಗಳನ್ನು ಹೇಳಿಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಕೂಡ ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುವಂತೆ ದುಡಿಯುತ್ತಿದ್ದಾರೆ. ಅವರಷ್ಟೇ ಓದಿನಲ್ಲಿ ಕೂಡ ಮುಂದಿದ್ದಾರೆ. ಹೀಗಾಗಿ ಪೋಷಕರು ಮಕ್ಕಳಿಗೆ ಕೆಲಸ ಹೇಳಲು ಹೋಗುವುದಿಲ್ಲ ತನ್ನ ಕೈಲಾದಷ್ಟು ಕೆಲಸ ಮಾಡಿ ಮುದ್ದಿನಿಂದ ಸಾಕುತ್ತಿದ್ದಾರೆ.

ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ಕೊಟ್ಟ ತಾಯಿ, ಮಗಳ ಪರದಾಟ ನೋಡಿ
ಕುಕ್ಕರ್

Updated on: Dec 21, 2024 | 12:52 PM

ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನು ವಹಿಸಿ ಕೆಲಸ ಕಲಿಸುತ್ತಿದ್ದರು. ಗಂಡಸರು ಹೊರಗೆ ಹೋಗಿ ದುಡಿದುಕೊಂಡು ಬರಬೇಕು ಹೆಣ್ಣುಮಕ್ಕಳು ಮನೆಯನ್ನು ನಿಭಾಯಿಸಬೇಕು ಎನ್ನುವ ಮನಸ್ಥಿತಿ ಇತ್ತು. ಹಾಗಾಗಿ ಹೆಣ್ಣುಮಕ್ಕಳಿಗೆ ಚಿಕ್ಕವಿರುವಾಗಲೇ ಅಡುಗೆ, ಮನೆಯ ಕೆಲಸಗಳನ್ನು ಹೇಳಿಕೊಡುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಕೂಡ ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುವಂತೆ ದುಡಿಯುತ್ತಿದ್ದಾರೆ. ಅವರಷ್ಟೇ ಓದಿನಲ್ಲಿ ಕೂಡ ಮುಂದಿದ್ದಾರೆ. ಹೀಗಾಗಿ ಪೋಷಕರು ಮಕ್ಕಳಿಗೆ ಕೆಲಸ ಹೇಳಲು ಹೋಗುವುದಿಲ್ಲ ತನ್ನ ಕೈಲಾದಷ್ಟು ಕೆಲಸ ಮಾಡಿ ಮುದ್ದಿನಿಂದ ಸಾಕುತ್ತಿದ್ದಾರೆ.

ಅಪರ್ಣಾ ಸಿಂಗ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. 1997 ರಿಂದ 2012ರ ನಡುವೆ ಹುಟ್ಟಿದ ಮಕ್ಕಳಿಗೆ ಯಾವ ಕೆಲಸವೂ ಸರಿಯಾಗಿ ಬರುವುದಿಲ್ಲ ಎಂದು ಅಪರ್ಣಾರ ನಂಬಿಕೆ. ಹಾಗಾಗಿ ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ನೀಡಿದ್ದರು. ಆ ಕುಕ್ಕರ್​ನ ಮುಚ್ಚುಳ ನೇರವಾಗಿರಲಿಲ್ಲ, ಓರೆಯಾಗಿ ಮಾಡಿ ಹಾಕಬೇಕಾಗಿತ್ತು.

ಮತ್ತಷ್ಟು ಓದಿ:ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್​​​ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್‌

ಆದರೆ ಅವರ ಮಗಳು ಎಷ್ಟೇ ಕಷ್ಟ ಪಟ್ಟರೂ ಕೊನೆಯವರೆಗೂ ಮುಚ್ಚುಳ ಹಾಕಲು ಬರಲೇ ಇಲ್ಲ. ಬಳಿಕ ಮಗಳ ಕಷ್ಟ ನೋಡಿ ತಾಯಿಯೇ ಹೇಳಿಕೊಟ್ಟಿದ್ದಾರೆ. ಈ ವಿಡಿಯೋವನ್ನು 24 ಜನರು ವೀಕ್ಷಿಸಿದ್ದಾರೆ, ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ತಮಗೂ ಗೊತ್ತರಲಿಲ್ಲ ಎಂದು ಕೆಲವರು ಹೇಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:52 pm, Sat, 21 December 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us