ಬೆಕ್ಕು ನಾಯಿ ಶತ್ರುಗಳು ಎನ್ನುತ್ತಾರೆ. ಆದರೆ ಅಪರೂಪಕ್ಕೆ ಇದು ಸುಳ್ಳು ಎನ್ನುವುದನ್ನು ಕೆಲ ಬೆಕ್ಕು ನಾಯಿಗಳು ಆಗಾಗ ಸಾಬೀತುಪಡಿಸುತ್ತಿರುತ್ತವೆ. ಒಡಹುಟ್ಟಿದವರಂತೆಯೋ, ತಾಯಿ ಮಗುವಿನಂತೆಯೋ, ಅಪ್ಪ ಮಗುವಿನಂತೆಯೋ, ಸ್ನೇಹಿತರಂತೆಯೋ ಆಟವಾಡಿಕೊಂಡಿರುತ್ತವೆ. ಪರಸ್ಪರ ಕಾಳಜಿ ತೆಗೆದುಕೊಳ್ಳುತ್ತವೆ. ಪ್ರೀತಿಸಿಕೊಳ್ಳುತ್ತವೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿರುವ ಕೋಟ್ಯಂತರ ವಿಡಿಯೋಗಳೇ ಇದಕ್ಕೆ ಸಾಕ್ಷಿ.
ಈ ವಿಡಿಯೋ ನೋಡಿ.
ನಿಮ್ಮಿಬ್ಬರಿಗಿಂತ ನಾನು ಚಿಕ್ಕವನೇ ಇರಬಹುದು. ಆದರೆ ನಾನು ನಿಮಗೆ ಸಮ ಎನ್ನುತ್ತಿದೆ ಈ ಬೆಕ್ಕು! ಎರಡೂ ನಾಯಿಗಳು ತಮ್ಮಷ್ಟಕ್ಕೆ ತಾವು ಆಟದಲ್ಲಿ ಮುಳುಗಿದ್ದರೆ ಈ ಬೆಕ್ಕು ರೆಫರಿಯಂತೆ ವರ್ತಿಸಿದೆ. ಮಾರ್ಚ್ 26 ರಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಈತನಕ 1.3 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 80,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಈ ಸುಂದರವಾದ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್
ಈ ಬೆಕ್ಕು ಖಂಡಿತ ರೆಫರಿ ಎಂದು ಒಬ್ಬರು ಹೇಳಿದ್ದಾರೆ. ಈ ಮೂರನ್ನು ನೋಡುತ್ತಿದ್ದರೆ ಸಣ್ಣದು ಖಂಡಿತ ಇವುಗಳ ತಮ್ಮನೋ ತಂಗಿಯೋ ಇರಬೇಕು ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪಂಜದಿಂದ ಹೊಡೆಯುವ ಆ ಶೈಲಿ ನೋಡಿ, ಈ ಮೂವರೂ ವೃತ್ತಿಪರ ಆಟಗಾರರಂತೆ ತೋರುತ್ತಿದ್ದಾರೆ ಎಂದಿದ್ದಾರೆ ಹಲವರು.
ಆಟವನ್ನು ಮುಗಿಸಿ ಕೊನೆಯಲ್ಲಿ ಮೂರೂ ಸೇರಿ ವಿಶ್ರಮಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಪ್ರೀತಿ ಉಕ್ಕಿಬರುತ್ತದೆ. ಆಟವೇ ಇಲ್ಲಿ ಪ್ರೀತಿ, ಪ್ರೀತಿಯೇ ಇಲ್ಲಿ ಆಟವೆಂಬಂತೆ ಈ ಮೂರು ಜೀವಗಳು ವ್ಯಕ್ತಪಡಿಸಿವೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:37 am, Tue, 2 May 23