ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದ (Work stress), ಮನೆಯಲ್ಲಿ ಪ್ರೆಷರ್ (Family Pressure), ಹಣಕಾಸಿನ ಟೆನ್ಶನ್ (Financial stress) ಇವೆಲ್ಲದರಿಂದ ಜನರಿಗೆ ಕೆಲಸದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ. ಅದರಲ್ಲೂ ವರ್ಕ್ ಫ್ರಮ್ ಹೋಂ (Work from home) ಇರುವವರಿಗೆ ಬಿಡುವು ಎನ್ನುವುದೇ ಇರುವುದಿಲ್ಲ. ಇದೇ ಸಮಸ್ಯೆಯನ್ನು ಎದುರಿಸಿದ ಉದ್ಯೋಗಿಯೊಬ್ಬರು ಟ್ವಿಟ್ಟರ್ನಲ್ಲಿ (Twitter) ತಮ್ಮ ಬಾಸ್ ಕರೆಗಳನ್ನು ತಪ್ಪಿಸಿದಾಗ ಏನಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ನಂತರ ಅವರು ಫ್ರಸ್ಟೇಟ್ ಆಗಿರುವುದರಿಂದ ಮಾತನಾಡಲು ಇಷ್ಟ ಪಡುವುದಿಲ್ಲ ಎಂದಾಗ ಬಾಸ್ ಯಾವ ರೀತಿ ಪ್ರತಿಕ್ರಿಯಿಸಿದರು ಎಂಬುದನ್ನು ಹೇಳುತ್ತಾರೆ, ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರ ಸ್ತುತಿ (@stutiraii) ಟ್ವಿಟ್ಟರ್ನಲ್ಲಿ, “ಎರಡು ಉತ್ತರಿಸದ ಕರೆಗಳ ನಂತರ, ನನ್ನ ಬಾಸ್ ನನಗೆ, ದಯವಿಟ್ಟು ಮರಳಿ ಕರೆ ಮಾಡಿ. ಎಂಬ ಸಂದೇಶ ಕಳುಹಿಸಿದ್ದರು”. ಇದಕ್ಕೆ ನಾನು “ನಾನು ಫ್ರಸ್ಟೇಟ್ ಆಗಿದ್ದೇನೆ, ಈಗ ಮಾತನಾಡಲು ಬಯಸುವುದಿಲ್ಲ ಎಂದು ಅವರಿಗೆ ಸಂದೇಶ ಕಳುಹಿಸಿದೆ, ಅದಕ್ಕೆ ಅವರು, ನಿಮ್ಮ ಕೆಲಸವನ್ನು ನನಗೆ ಒಪ್ಪಿಸಿ ನಂತರ 3-4 ದಿನ ರಜೆ ತೆಗೆದುಕೊಳ್ಳಿ ಆದರೆ ಕೆಟ್ಟ ಮನಸ್ಥಿತಿಯಲ್ಲಿರಬೇಡಿ. ಇದನ್ನೇ ನಾನು ಆರೋಗ್ಯಕರ ಕೆಲಸದ ಸಂಸ್ಕೃತಿ ಎಂದು ಕರೆಯುತ್ತೇನೆ!” ಎಂದರು, ಹೀಗೆಂದು ಸ್ತುತಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
after two unanswered calls, my boss messaged me, “please call back.” i messaged her back, saying im frustrated and don’t wanna talk, to which she replied, hand over your work to me and take 3-4 days off but don’t be in a bad mood.
this is what i call a healthy work culture !— Stuti (@stutiraii) March 27, 2023
ಈ ಟ್ವೀಟ್ ವೈರಲ್ ಆಗಿದ್ದು, 3.54 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅಂತಹ ಆರೋಗ್ಯಕರ ಕೆಲಸದ ವಾತಾವರಣದಲ್ಲಿ ಕೆಲಸ ಮಾಡಲು ನೆಟ್ಟಿಗರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರನು, “ಕೌನ್ ಹೈ ಯೇ ಲಾಗ್? ಕಹಾನ್ ಸೆ ಆತೇ ಹೈ?” ಎಂದರೆ, ಎರಡನೇ ಬಳೆಕೆದಾರ “ರಿಫ್ರೆಶ್ ಆಗಲು, ನನಗೂ ಇಂತಹ ಮ್ಯಾನೇಜರ್ ಇರುವ ಕೆಲಸ ಬೇಕು” ಎಂದು ಸೇರಿಸಿದ್ದಾರೆ. “ಇಂತಹ ಒಬ್ಬ ಬಾಸ್ ಅನ್ನು ಮಾಡೆಯಲು ನಾನು ಅರ್ಹನಾಗಿದ್ದೇನೆ ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ, “ಇದು ಕೆಲಸದ ಸಂಸ್ಕೃತಿಯಾಗಿರಬೇಕು,ಜೊತೆಗೆ ಕೆಲವು ಸರಿಯಾದ ನಿಯಮಗಳನ್ನೂ ಮಾಡಬೇಕು, ಆಗ ಜನರು ಇದನ್ನು ಜನರು ದುರುಪಯೋಗ ಮಾಡಿಕೊಳ್ಳುವುದಿಲ್ಲ!” ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ನೀಡಿದ ಚಿನ್ನದ ಹುಡುಗ; ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ನೋಡಿ!
ಆದರೆ ಒಬ್ಬ ಬಳಕೆದಾರ, “ಇದನ್ನು ಹೇಳುತ್ತಿರುವುದಕ್ಕೆ ಕ್ಷಮಿಸಿ ಆದರೆ ನೀವು ಪ್ರತಿಕ್ರಿಯಿಸಿದ ರೀತಿ ಸರಿಯಿಲ್ಲ ಎಂಬುದು ನನ್ನ ಅನಿಸಿಕೆ.” ಎಂದು ಹೇಳಿವುದಾಗ, ಸ್ತುತಿ, “ನಾನು ಪರಿಸ್ಥಿತಿಯನ್ನು ಅರ್ತ ಮಾಡಿಕೊಂಡಿದ್ದೇನೆ ಮತ್ತು ಹೌದು ನಾನು ಸ್ವಲ್ಪ ಒರಟಾಗಿಯೇ ಉತ್ತರಿಸಿದ್ದೆ.” ಎಂದು ಪ್ರತಿಕ್ರಿಯಿಸಿದರು.