ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಗನಸಖಿಯ ಪೋರ್ಟ್ರೇಟ್ ಚಿತ್ರಿಸಿ ಕೊಟ್ಟಾಗ

Portrait : ಗಗನಸಖಿಗೆ ಆಕೆಯ ಪೋರ್ಟ್ರೇಟ್​ ಬಿಡಿಸಿಕೊಡುತ್ತಾನೆ ಅಪರಿಚಿತ ಪ್ರಯಾಣಿಕ. ಆಕೆ ಅವನಿಗೆ ಪ್ರತಿಯಾಗಿ ಏನು ಕೊಡುತ್ತಾಳೆ? ಈ ವಿಡಿಯೋ ನೋಡಿ.

ಪ್ರಯಾಣಿಕರೊಬ್ಬರು ವಿಮಾನದಲ್ಲಿ ಗಗನಸಖಿಯ ಪೋರ್ಟ್ರೇಟ್ ಚಿತ್ರಿಸಿ ಕೊಟ್ಟಾಗ
Man draws flight attendants portrait gifts it to her
Edited By:

Updated on: Oct 31, 2022 | 10:33 AM

Viral Video : ಅಪರಿಚಿತರು ನಿಮ್ಮ ಪೋರ್ಟ್ರೇಟ್​ ಚಿತ್ರಿಸಿ ಕೊಟ್ಟರೆ ಏನೆನ್ನಿಸುತ್ತದೆ? ಅದೇ ಭಾವ ಈ ಗಗನಸಖಿಗೂ ಉಂಟಾಗಿದೆ. ವಿಮಾನ ಪ್ರಯಾಣದಲ್ಲಿ ಪ್ರಯಾಣಿಕನೊಬ್ಬ ಈಕೆಯ ಪೋರ್ಟ್ರೇಟ್​ ಚಿತ್ರಿಸಿ ಇದು ನಿಮಗೆ ಗಿಫ್ಟ್​ ಎಂದಿದ್ದಾನೆ. ಅಚ್ಚರಿ, ಖುಷಿಯಿಂದ ಆಕೆ ಪ್ರತಿಯಾಗಿ ಇವನಿಗೂ ಉಡುಗೊರೆ ಕೊಟ್ಟಿದ್ದಾಳೆ. ಏನದು? ಕುತೂಹಲ ಉಂಟಾಗ್ತಿದೆಯಾ? ಈ ವಿಡಿಯೋ ನೋಡಿ.

ಆಕೆ ಕೂಡ ಆ ಕ್ಷಣದಲ್ಲಿಯೇ ಏನನ್ನೋ ಚಿತ್ರಿಸಿ ಧನ್ಯವಾದ ಅರ್ಪಿಸಿದ್ದಾಳೆ. ಪುಟ್ಟ ಥೈಲಿಯಲ್ಲಿ ಇನ್ನೇನೋ ಗಿಫ್ಟ್​ ಕೊಟ್ಟಿದ್ದಾಳೆ ಆ ಪ್ರಯಾಣಿಕನಿಗೆ. ಈ ತನಕ ಈ ವಿಡಿಯೋ 85,000 ಕ್ಕೂ ಹೆಚ್ಚು ವೋಟ್​ಗಳನ್ನು ಗಳಿಸಿದೆ. ಅನೇಕರು ಈ ವಿಡಿಯೋ ನೋಡಿ ಹರ್ಷಗೊಂಡಿದ್ದಾರೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಇಷ್ಟು ವೇಗವಾಗಿ ಇಷ್ಟು ಚೆಂದವಾಗಿ ಸ್ಕೆಚ್​ ಮಾಡಿದ್ದಾರೆ, ಬಹಳ ಖುಷಿ ಆಯಿತು’ ಎಂದಿದ್ದಾರೆ ಒಬ್ಬರು. ‘ಅದ್ಭುತ ಇದು. ಕಲಾವಿದನ ನೈಪುಣ್ಯತೆ ಮೆಚ್ಚಿದೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ಇಂಥ ಅಚ್ಚರಿಗಳು ಕೆಲಸದ ಒತ್ತಡವನ್ನು ಖಂಡಿತ ಕಡಿಮೆ ಮಾಡುತ್ತವೆ’ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ಪ್ರಯಾಣಿಕರ ಹಾದಿಯನ್ನು ಸುಂದರಗೊಳಿಸುತ್ತವೆ’ ಎಂದು ಮಗದೊಬ್ಬರು ಹೇಳಿದ್ದಾರೆ.

ಅಪರಿಚಿತರು ಹೀಗೆಲ್ಲ ಖುಷಿಗೊಳಿಸಿದರೆ ಅದಕ್ಕಿಂತ ಆಹ್ಲಾದಕರ ಸಮಯ ಇನ್ನೇನಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:29 am, Mon, 31 October 22