ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಕಾಣುವ ಹಿಮಾಲಯ ಪರ್ವತ ಶ್ರೇಣಿಯನ್ನು ನೀವೂ ಕಣ್ತುಂಬಿಸಿಕೊಳ್ಳಿ

|

Updated on: Jun 04, 2021 | 6:42 PM

ಚಿತ್ರದಲ್ಲಿ ಹಿಮಾಲಯ ಪರ್ವತ ಶ್ರೇಣಿಯನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಸೂರ್ಯರಶ್ಮಿ ಪರ್ವತ ಶ್ರೇಣಿಯ ಮೇಲೆ ಎಳೆ ಎಳೆಯಾಗಿ ಬೀಳುತ್ತಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಈ ದೃಶ್ಯವನ್ನು ನೋಡುವ ಖುಷಿಯೇ ಬೇರೆ ಎಂದು ಅವರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಕಾಣುವ ಹಿಮಾಲಯ ಪರ್ವತ ಶ್ರೇಣಿಯನ್ನು ನೀವೂ ಕಣ್ತುಂಬಿಸಿಕೊಳ್ಳಿ
ಹಿಮಾಲಯದ ಚಿತ್ರ ಹಂಚಿಕೊಂಡ ಗಗನಯಾತ್ರಿ
Follow us on

ನಾಸಾ ಸಂಸ್ಥೆಯ ಗಗನಯಾತ್ರಿ ಮಾರ್ಕ್ ವಂಡೇ ಹೀ ಜೂನ್ 2ರಂದು ಸೆರೆಹಿಡಿಯಲಾದ ಹಿಮಾಲಯ ಪರ್ವತ ಶ್ರೇಣಿಯ ಅಮೋಘ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ತಾವು ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾಗಿ ಹೇಳಿಕೊಂಡಿರುವ ಅವರು, ಈ ಚಿತ್ರ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ ಎಂದು ತಿಳಿಸಿದ್ದಾರೆ.

ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಹಿಮಾಲಯ ಪರ್ವತ ಶ್ರೇಣಿಯನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಸೂರ್ಯರಶ್ಮಿ ಪರ್ವತ ಶ್ರೇಣಿಯ ಮೇಲೆ ಎಳೆ ಎಳೆಯಾಗಿ ಬೀಳುತ್ತಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಈ ದೃಶ್ಯವನ್ನು ನೋಡುವ ಖುಷಿಯೇ ಬೇರೆ ಎಂದು ಅವರು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಸೋಲಾರ್ ಫಲಕವನ್ನು ಸಹ ಈ ಚಿತ್ರದಲ್ಲಿ ಕಾಣಬಹುದು.

ಕೆಲವರಿಗೆ ಈ ಹಿಮಾಲಯ ಪರ್ವತ ಶ್ರೇಣಿಯ ಚಿತ್ರ ನೋಡಿ ಶಿವನ ನೆನಪೂ ಬಂದಿದೆ. ಶಿವನ ವಾಸಸ್ಥಾನ ಹಿಮಾಲಯ..ಓಂ ನಮಃ ಶಿವಾಹ ಎಂದೂ ಕೆಲವು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರಿಗೆ ಐಸ್​ಕ್ರೀಂನ ನೆನಪು ಬಂದಿದ್ದು, ತಮಗೆ ಈಗಲೇ ಐಸ್​ಕ್ರೀಂ ತಿನ್ನಬೇಕು ಅನಿಸುತ್ತಿದೆ ಎಂದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

(Nasa astronaut shares Himalayan mountain pictures from International Space Station)