Optical Illusion: ಚಿತ್ರದಲ್ಲಿ ಅಡಗಿರುವ ಗಿಳಿಯನ್ನು 10 ಸೆಕೆಂಡುಗಳಲ್ಲಿ ಪತ್ತೆಹಚ್ಚಿ

ನೀವು ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಅಡಗಿರುವ ಗಿಳಿಯನ್ನು ಪತ್ತೆಹಚ್ಚಬಹುದು. ಎಷ್ಟೇ ಹುಡುಕಿದರೂ ನಿಮಗೆ ಗಿಳಿ ಗೋಚರವಾಗುತ್ತಿಲ್ಲವೆಂದಾದರೆ ಉತ್ತರವನ್ನು ಈ ಲೇಖನದ ಅಂತ್ಯದಲ್ಲಿ ತಿಳಿದುಕೊಳ್ಳಿ.

Optical Illusion: ಚಿತ್ರದಲ್ಲಿ ಅಡಗಿರುವ ಗಿಳಿಯನ್ನು 10 ಸೆಕೆಂಡುಗಳಲ್ಲಿ ಪತ್ತೆಹಚ್ಚಿ
Optical Illusion

Updated on: Jan 14, 2024 | 4:59 PM

ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusion) ಸವಾಲಿನ ಆಟದಲ್ಲಿ ನೀವು ಈ ಚಿತ್ರದಲ್ಲಿ ಅಡಗಿರುವ ಗಿಳಿಯನ್ನು ಪತ್ತೆ ಹಚ್ಚಬೇಕಿದೆ. ಇಂತಹ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ಚಿತ್ರದಲ್ಲಿರುವ ಗಿಳಿಯನ್ನು ಪತ್ತೆ ಹಚ್ಚಿ ನೋಡೋಣ.

ಮೇಲಿನ ಚಿತ್ರದಲ್ಲಿ, ನೀವು ಅನೇಕ ಬಣ್ಣ ಬಣ್ಣದ ಎಲೆಗಳು ಹಾಗೂ ಹೂವುಗಳನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಗಿಳಿಯೊಂದು ಅಡಗಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ನೀವು ಗಿಳಿಯನ್ನು ಕಂಡು ಹಿಡಿಯಿರಿ.

ಇದನ್ನೂ ಓದಿ: ‘b’ಗಳ ಮಧ್ಯದಲ್ಲಿ ಅಡಗಿರುವ ‘h’ನ್ನು ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ?

ಇನ್ನೂ ನಿಮಗೆ ಗಿಳಿಯನ್ನು ಹುಡುಕಲು ಕಷ್ಟವಾಗುತ್ತಿದೆಯೇ? ಚಿತ್ರವನ್ನು ಮೇಲಿಂದ ಸರಿಯಾಗಿ ನೋಡುತ್ತಾ ಬನ್ನಿ. ಕೆಳಭಾಗದಲ್ಲಿ ಗಿಳಿಯನ್ನು ಕಂಡಿರಾ? ಎಷ್ಟೇ ಎಷ್ಟೇ ಹುಡುಕಿದರೂ ಗಿಳಿಯನ್ನು ಕಂಡುಹಿಡಿಯಲು ಸಾಧ್ಯವಿಲ್ಲವೆಂದಾದರೆ ಕೆಳಗಿನ ಚಿತ್ರದಲ್ಲಿ ಕಪ್ಪು ಬಣ್ಣದ ವೃತ್ತದಲ್ಲಿ ಗಿಳಿಯನ್ನು ಗುರುತಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us