ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು

Python : ಮನುಷ್ಯನ ಮನಸ್ಸನ್ನೇ ಅರ್ಥ ಮಾಡಿಕೊಳ್ಳಲಾಗದು ಇನ್ನು ಪ್ರಾಣಿಗಳದ್ದು... ಈ ಹೆಬ್ಬಾವಿಗೆ ಹಸಿವಾಗಿತ್ತೋ ಏನೋ ಗೊತ್ತಿಲ್ಲ. ಒಮ್ಮೆಲೆ ಆಕೆಯ ಕೈ ಕಚ್ಚಿ ಸುತ್ತಿಕೊಂಡುಬಿಡುತ್ತದೆ. ನಂತರ ಮುಂದೇನಾಗುತ್ತದೆ ವಿಡಿಯೋ ನೋಡಿ.

ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು
Python bites owner grips her hand while she takes it out of cage
ಶ್ರೀದೇವಿ ಕಳಸದ

Updated on: Oct 27, 2022 | 11:22 AM

Viral Video : ವನ್ಯಜೀವಿಗಳು ಎಷ್ಟೇ ಆದರೂ ತಮ್ಮ ಗುಣಸ್ವಭಾವಗಳನ್ನು ಬಿಟ್ಟುಕೊಡವು. ನಾಡಿಗೆ ತಂದು ಪಳಗಿಸಿದರೂ ಅಪಾಯ ತಪ್ಪಿದ್ದಲ್ಲ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹೆಬ್ಬಾವು ತನ್ನ ಪೋಷಕಿಯ ಮೇಲೆ ದಾಳಿ ಮಾಡಿದೆ. Daily Loud ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 8  ಮಿಲಿಯನ್​ ಜನರು ಈ ಆಘಾತಕಾರಿ ವಿಡಿಯೋ ನೋಡಿದ್ದಾರೆ. ಪ್ರಾಣಿ ಪ್ರಿಯರಿಗೆ ಪ್ರಾಣಿಗಳೇ ಅವರ ಜಗತ್ತು. ಮಕ್ಕಳಂತೆ ಮುದ್ದುಗರೆಯುವುದೇ ಅವರ ದಿನಚರಿ. ಈಗಲೂ ಈಕೆ ತನ್ನ ಪ್ರೀತಿಯ ಹೆಬ್ಬಾವನ್ನು ಮಾತನಾಡಿಸುತ್ತ ಹೊರತೆಗೆಯಲು ನೋಡಿದ್ದಾಳೆ. ಆದರೆ ಅದು ಮಾತ್ರ…

ಈ ವಿಡಿಯೋ ಒಂದು ನಿಮಿಷದ್ದು. ಅದರ ಬಾಕ್ಸ್​ನಿಂದ ಹೊರತೆಗೆಯುವಾಗ ಹೆಬ್ಬಾವು ಅವಳ ಕೈಯನ್ನು ಕಚ್ಚಿ ಇದ್ದಕ್ಕಿದ್ದಂತೆ ಸುತ್ತಿಕೊಳ್ಳುತ್ತದೆ. ಕ್ರಮೇಣ ತೋಳಿಗೂ ಸುತ್ತಿಕೊಳ್ಳುತ್ತದೆ. ಸುತ್ತಿಕೊಂಡ ಬಿಗಿಯಿಂದ ಅದನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ವಿಡಿಯೋ ಮಾಡುತ್ತಿದ್ ವ್ಯಕ್ತಿ ಈಕೆಗೆ ಸಹಾಯ ಮಾಡಲು ಬಂದಾಗ ಕೂಡ ಅದು ಮತ್ತಷ್ಟು ಉಗ್ರವಾಗುತ್ತದೆ. ಆಕೆಯ ಕೈ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಕೊನೆಗೆ ಅವಳ ಕಾಲನ್ನೂ ಸುತ್ತಿಕೊಳ್ಳುತ್ತದೆ. ಕ್ರಮೇಣ ರಕ್ತವೂ ಚಿಮ್ಮುತ್ತದೆ.

ನೆಟ್ಟಿಗರಂತೂ ಗಾಬರಿಯಾಗಿದ್ದಾರೆ. ಅದಕ್ಕೇ ಇಂಥ ಭಯಾನಕ ಪ್ರಾಣಿಗಳನ್ನು ನಾವು ಇಷ್ಟಪಡುವುದಿಲ್ಲ ಎಂದಿದ್ದಾರೆ ಒಬ್ಬರು. ಮುಂದೆ ಏನಾಯಿತು? ಹೆಬ್ಬಾವನ್ನು ಹೇಗೆ ಬಿಡಿಸಲಾಯಿತು ಎಂದು ಮತ್ತೊಬ್ಬರು ಕೇಳಿದ್ದಾರೆ. ಹಾವಿಗೆ ಹಸಿವಾಗಿತ್ತೋ ಏನೋ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಸಹವಾಸ ಅಲ್ಲ ಇದು ಎಂದಿದ್ದಾರೆ ಮಗದೊಬ್ಬರು.

ಹುಷಾರು ವನ್ಯಜೀವಿಗಳೊಂದಿಗೆ ಒಡನಾಡುವಾಗ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us