Dolphin: ಮೋಜಿಗಾಗಿ, ಹಣಕ್ಕಾಗಿ ಹೀಗೆ ಪ್ರಾಣಿಗಳನ್ನು ಯಾಕೆ ಪಳಗಿಸುತ್ತೀರಿ? ಈ ಮೂಲಕ ಯಾರನ್ನು ಮೆಚ್ಚಿಸಲು ಬಯಸುತ್ತಿದ್ದೀರಿ? ಇದು ಮೂರ್ಖರ ಲಕ್ಷಣ. ಇಂಥ ದುರಾಸೆಗಳಿಂದ ಹೊರಬನ್ನಿ. ಪ್ರಾಣಿಗಳಿಗೆ ಅವುಗಳದೇ ಆದ ಜೀವನಚಕ್ರವಿದೆ. ಜೀವವೈವಿಧ್ಯವು (Biodiversity) ಪರಸ್ಪರ ಅವಲಂಬಿತವಾಗಿದೆ. ಹೀಗೆ ತೊಂದರೆ ಕೊಟ್ಟು ಪ್ರಕೃತಿಯನ್ನು ಅಸಮತೋಲನಗೊಳಿಸದಿರಿ ಎಂದು ನೆಟ್ಟಿಗರು ಈ ವಿಡಿಯೋ ಪೋಸ್ಟ್ ಮಾಡಿದವರಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರತೀ ಜೀವಿಗೂ ಸ್ವಾತಂತ್ರ್ಯ ಬೇಕು. ನಿಮ್ಮ ಸ್ವಾರ್ಥಕ್ಕಾಗಿ ಹೀಗೆ ಇವುಗಳನ್ನು ಬಂಧಿಸಬೇಡಿ. ನೀವು ಅವುಗಳನ್ನು ಪ್ರೀತಿಸುತ್ತೀರಿ ಎಂದಾದಲ್ಲಿ ಅವುಗಳನ್ನು ಅವುಗಳಷ್ಟಕ್ಕೇ ಇರಲು ಬಿಡಿ. ದೊಡ್ಡ ಸಮುದ್ರದಲ್ಲಿ ಸಹಜೀವಿಗಳೊಂದಿಗೆ ಅವು ವಾಸಿಸಬೇಕು. ಪ್ರದರ್ಶನದ ಸಲುವಾಗಿ ಹೀಗೆ ಗುಂಡಿಯಲ್ಲಿ ಅವುಗಳನ್ನು ಕೂಡಿಹಾಕಬೇಡಿ. ಪ್ರದರ್ಶನ ನೀಡುವ ನೆಪದಲ್ಲಿ ನೀವು ಇವುಗಳಿಗೆ ಚಿತ್ರಹಿಂಸೆ ನೀಡುತ್ತಿದ್ದೀರಿ ಹೀಗೆ ಜನರು ಒಂದೇ ಉಸಿರಿನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral:ಸರಳ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!
ಕ್ಯೂಟ್! ತುಂಬಾ ಮುದ್ದಾಗಿದೆ ಎಂದು ಹೇಳುವ ಅನೇಕರನ್ನು ಪ್ರಾಣಿದಯಾಪರರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬರೀ ವಿಡಿಯೋ ನೋಡಿ ಕ್ಯೂಟ್ ಎಂದರೆ ಮುಗಿಯದು, ವಾಸ್ತವದಲ್ಲಿ ಯೋಚಿಸಿ ಭ್ರಮಾಲೋಕದಲ್ಲಿ ವಿಹರಿಸಬೇಡಿ ಅಂತೆಲ್ಲ. ಇದು ಪ್ರಾಣಿ ಶೋಷಣೆ, ಪ್ರಾಣಿ ಹಿಂಸೆ ಅಂತೆಲ್ಲ ಆಕ್ರೋಶಗೊಂಡಿದ್ಧಾರೆ. ಇನ್ನೂ ಕೆಲವರು ಇದು ಗ್ರಾಫಿಕ್ ತಂತ್ರ ಎನ್ನುತ್ತಿದ್ದಾರೆ.
ಪ್ರೀತಿ ಎನ್ನವುದು ಸಹಜತನದಿಂದ ಕೂಡಿರುವಂಥದ್ದು. ಆದರೆ ನಾವು ವಿನಾಕಾರಣ ಯಾಕೆ ಇಂಥ ಸಾಹಸಕ್ಕಿಳಿಯುತ್ತಿದ್ಧೇವೆ?
ಒಟ್ಟಾರೆ ಈ ವಿಡಿಯೋದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:47 am, Mon, 29 May 23