
Viral Video : ಮೊದಲು ಹಣೆ, ಕೈಮೇಲಷ್ಟೇ ನಿರ್ದಿಷ್ಟ ವಿನ್ಯಾಸದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಬಹಳವೆಂದರೆ ಕೈಮೇಲೆ ಪ್ರೀತಿಪಾತ್ರರ ಹೆಸರುಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ. ಪ್ರೀತಿಪಾತ್ರರ ಹೆಸರಿನೊಂದಿಗೆ ಫೋಟೋ ಕೂಡ ಹಾಕಿಸಿಕೊಳ್ಳುತ್ತಾರೆ. ಇಷ್ಟವಾದ ಯಾವ ವಿನ್ಯಾಸವನ್ನೂ, ಛಾಯಾಚಿತ್ರವನ್ನೂ ದೇಹದ ಯಾವುದೇ ಭಾಗದಲ್ಲಿಯೂ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ. ಸ್ವಿಗ್ಗಿ ಇದನ್ನು ಟ್ವೀಟ್ ಮಾಡಿದೆ. ಒಬ್ಬ ವ್ಯಕ್ತಿ ರಾಜ್ಮಾ ಚಾವಲ್ ಎಂದು ತನ್ನ ಹೊರದೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ನೆಟ್ಟಿಗರು ಈ ಬಗ್ಗೆ ಸಾಕಷ್ಟು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.
ಎಲ್ಲಾ ಬಿಟ್ಟು ಈ ವ್ಯಕ್ತಿ ಹೀಗೆ ಯಾಕೆ ಹಾಕಿಸಿಕೊಂಡಿದ್ದು ಎಂದು ಯೋಚಿಸುತ್ತಿದೆ ನೆಟ್ಮಂದಿ. ನಾನು ವಡಾ ಪಾವ್, ಪಾವ್ ಭಾಜಿ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಒಬ್ಬರು. ಇದು ನಮ್ಮ ನಿತ್ಯದ ಆಹಾರ, ಇದರಲ್ಲಿ ನನಗೆ ಅಸಹಜ ಎಂದು ಅನ್ನಿಸಿಲ್ಲ ಎಂದಿದ್ದಾರೆ ಮತ್ತೊಬ್ಬರು. ನಾನು ಚೋಲೆ ಬಟೂರೆ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಇನ್ನೊಬ್ಬರು. ನಾನು ಚಹಾ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಮಗದೊಬ್ಬರು.
ಇದನ್ನೂ ಓದಿ : ಯುರೋಪ್ಗೆ ಡ್ರಗ್ಸ್ ಕಳ್ಳಸಾಗಣೆ ಮಾಡುವುದು ಹೇಗೆ? ವ್ಯಕ್ತಿಯೊಬ್ಬನಿಗೆ ಚಾಟ್ಜಿಪಿಟಿ ಸಲಹೆ ಕೊಟ್ಟಾಗ
ಈ ಪೋಸ್ಟ್ ಅನ್ನು ಈಗಾಗಲೇ 15,000 ಜನರು ನೋಡಿದ್ದಾರೆ. 147 ಜನ ಇಷ್ಟಪಟ್ಟಿದ್ದಾರೆ. 14 ಜನರು ರೀಟ್ವೀಟ್ ಮಾಡಿದ್ದಾರೆ. ನಾನಂತೂ ಈ ವ್ಯಕ್ತಿಯನ್ನು ಪೂರ್ತಿ ಬೆಂಬಲಿಸುತ್ತೇನೆ ಎಂದಿದ್ದಾರೆ ಒಬ್ಬರು. ನಾನಂತೂ ಗುಲಾಬ್ ಜಾಮೂನ್ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ದಮ್ ಆಲೂ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.
ಇದನ್ನು ನೋಡಿ ನಿಮಗೇನಾದರೂ ಹೀಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನಿಸಿತೆ? ಹಾಗಿದ್ದರೆ ನಿಮ್ಮಿಷ್ಟದ ಯಾವ ತಿಂಡಿಯ ಹೆಸರನ್ನು ನೀವು ಎಲ್ಲಿ ಹಾಕಿಸಿಕೊಳ್ಳಲು ಬಯಸುತ್ತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:08 pm, Mon, 6 February 23