Viral Video: ಕ್ರಿಕೆಟ್​ನಲ್ಲಿ ಪಾಕ್​ ಎದುರು ಭಾರತದ ಜಯವನ್ನು ಸಂಭ್ರಮಿಸುತ್ತಾ ಮದುವೆಯಾದ ಜೋಡಿ

ನವಜೋಡಿಯೊಂದು ಕ್ರಿಕೆಟ್​ನಲ್ಲಿ ಪಾಕ್ ಎದುರು ಭಾರತ ಜಯ ಗಳಿಸಿರುವ ಪಂದ್ಯವನ್ನು ವೀಕ್ಷಿಸುತ್ತಾ ಸಂಭ್ರಮಿಸುತ್ತಾ ಸಪ್ತಪದಿ ತುಳಿದಿದ್ದು ಎಲ್ಲೆಡೆ ವೈರಲ್ ಆಗಿದೆ. ಕ್ರಿಕೆಟ್​ ಎಂದರೆ ಎಲ್ಲರಿಗೂ ಇಷ್ಟ ಅದರಲ್ಲೂ ಭಾರತ-ಪಾಕಿಸ್ತಾನ ಮ್ಯಾಚ್ ಎಂದರೆ ಮಿಸ್​ ಮಾಡಿಕೊಳ್ಳುವುದುಂಟೇ, ಇವರ ಮದುವೆಯ ದಿನವೇ ಪಂದ್ಯವಿದ್ದ ಕಾರಣ ಮ್ಯಾಚ್ ಮಿಸ್ ಮಾಡಿಕೊಳ್ಳಲು ಬಯಸದ ಜೋಡಿ ಮದುವೆಯ ವೇದಿಕೆ ಮೇಲೆಯೇ ಪರದೆಯನ್ನು ಅಳವಡಿಸಿ ಪಂದ್ಯ ವೀಕ್ಷಿಸಿದ್ದರು.

Viral Video: ಕ್ರಿಕೆಟ್​ನಲ್ಲಿ ಪಾಕ್​ ಎದುರು ಭಾರತದ ಜಯವನ್ನು ಸಂಭ್ರಮಿಸುತ್ತಾ ಮದುವೆಯಾದ ಜೋಡಿ
ಮದುವೆ

Updated on: Feb 27, 2025 | 12:35 PM

ಗುಜರಾತ್, ಫೆಬ್ರವರಿ 27:   ಕ್ರಿಕೆಟ್​ ಎಂದರೆ ಮೂಗುಮುರಿಯುವವರಿಗಿಂತ ಕಳ್ಳರಳಿಸುವವರೇ ಹೆಚ್ಚು,  ಕೆಲವರಿಗೆ ಊಟ, ತಿಂಡಿ, ನಿದ್ದೆಯಾದರೂ ಬಿಟ್ಟು ಕ್ರಿಕೆಟ್ ನೋಡುವ ಹುಚ್ಚಿರುತ್ತದೆ. ಹಾಗೆಯೇ ನವಜೋಡಿಯೊಂದು ಕ್ರಿಕೆಟ್​ನಲ್ಲಿ ಪಾಕ್ ಎದುರು ಭಾರತ ಜಯ ಗಳಿಸಿರುವ ಪಂದ್ಯವನ್ನು ವೀಕ್ಷಿಸುತ್ತಾ ಸಂಭ್ರಮಿಸುತ್ತಾ ಸಪ್ತಪದಿ ತುಳಿದಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಗುಜರಾತ್​ನಲ್ಲಿ ನಡೆದಿದೆ.

ಕ್ರಿಕೆಟ್​ ಎಂದರೆ ಎಲ್ಲರಿಗೂ ಇಷ್ಟ ಅದರಲ್ಲೂ ಭಾರತ-ಪಾಕಿಸ್ತಾನ ಮ್ಯಾಚ್ ಎಂದರೆ ಮಿಸ್​ ಮಾಡಿಕೊಳ್ಳುವುದುಂಟೇ, ಇವರ ಮದುವೆಯ ದಿನವೇ ಪಂದ್ಯವಿದ್ದ ಕಾರಣ ಮ್ಯಾಚ್ ಮಿಸ್ ಮಾಡಿಕೊಳ್ಳಲು ಬಯಸದ ಜೋಡಿ ಮದುವೆಯ ವೇದಿಕೆ ಮೇಲೆಯೇ ಪರದೆಯನ್ನು ಅಳವಡಿಸಿ ಪಂದ್ಯ ವೀಕ್ಷಿಸಿದ್ದರು.

ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ಸುಮಾರು 65 ಕೋಟಿ ಜನರು ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವನ್ನು ಮದುವೆ ಮಂಟಪದಲ್ಲಿ ದೊಡ್ಡ ಪರದೆಯ ಮೇಲೆ ತೋರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಮತ್ತಷ್ಟು ಓದಿ: ಎಮ್ಮೆ ಖರೀದಿಸಲು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆಯಾಗಲು ಹೋಗಿ ಅತ್ತೆ-ಮಾವನ ಕೈಗೆ ಸಿಕ್ಕಿ ಬಿದ್ದ ಮಹಿಳೆ

ಅದರ ನಂತರ ಮದುವೆಗೆ ಬಂದಿದ್ದ ಅತಿಥಿಗಳು ಆಚರಣೆಗಳನ್ನು ಬಿಟ್ಟು ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿತು. ಅಚ್ಚರಿಯ ವಿಷಯವೆಂದರೆ ಇಡೀ ಬಾರಾತ್ ಪರದೆಯ ಮುಂದೆ ಜಮಾಯಿಸಿದ್ದು, ವಧು-ವರರು ಸಹ ಆಚರಣೆಗಳ ಬದಲಿಗೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದಾರೆ.

ಪರಿಸ್ಥಿತಿ ಹೇಗಿದೆ ಎಂದರೆ ಮದುವೆಯಾಗುತ್ತಿರುವ ವಧು-ವರನ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಮತ್ತು ದಂಪತಿ ಸಹ ಇದರಿಂದ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಇಲ್ಲಿ ವರ ವಧುವಿನ ಕುತ್ತಿಗೆಗೆ ಮಾಂಗಲ್ಯಧಾರಣೆ ಮಾಡಿದ್ದಾನೆ.

ಈ ವೀಡಿಯೊವನ್ನು ವಿವಿಧ ವೇದಿಕೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ, ಆದರೆ ಅನೇಕ ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us