
Viral Video : ಹಾವು! ಆದಿ, ಜಾನಪದ ಮತ್ತು ಪುರಾಣಕಾಲದಿಂದಲೂ ಈ ಜೀವಿಗೆ ವಿಶಿಷ್ಟ ಸ್ಥಾನ. ಭಯ ಭಕ್ತಿ ಮೋಹದೊಂದಿಗೆ ಮನುಷ್ಯನನ್ನು ಅಂತರದಲ್ಲಿರಿಸಿಕೊಂಡೇ ತನ್ನ ಬಗ್ಗೆ ವಿಶೇಷ ಆಕರ್ಷಣೆ ಉಳಿಸಿಕೊಂಡು ಬಂದಿದೆ. ಕಾವ್ಯ, ಸಿನೆಮಾ, ನಾಟಕ, ನೃತ್ಯ ಮುಂತಾದ ಕಲಾಪ್ರಕಾರಗಳಲ್ಲಿ ನಾಗರಾಜ, ನಾಗಿಣಿಯರ ವೈಭವ ಹೇಳತೀರದು. ಉಳಿದಂತೆ ಈ ಚುರುಕಾದ ಜೀವಿಗಳ ಚಲನವಲನದ ಬಗ್ಗೆಯಂತೂ ಎಂದಿಗೂ ಕುತೂಹಲ ಕಟ್ಟಿಟ್ಟಿದ್ದೇ.
ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಹುಶಃ ಹಾವು ಆಕಳಿಸುವುದನ್ನು ನೀವು ನೋಡುತ್ತಿರುವುದು ಇದೇ ಮೊದಲಿರಬಹುದು. ಯಾವ ಪರಿ ಇದು ತನ್ನ ಬಾಯನ್ನು ಹಿಗ್ಗಿಸಿದೆ ನೋಡಿ. ಅಚ್ಚರಿ ಮತ್ತು ಭಯ ಒಮ್ಮೆಲೇ ಆಗುವುದಲ್ಲದೆ?
ಇದನ್ನೂ ಓದಿ : ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್
ಇಷ್ಟೊಂದು ದೊಡ್ಡದಾಗಿ ಆಕಳಿಸಲು ಅದೆಷ್ಟು ರಾತ್ರಿ ನಿದ್ದೆಗೆಟ್ಟಿತ್ತೋ ಏನೋ. ಯಾವೂರಿಗೆ ಪ್ರವಾಸಕ್ಕೆ ಹೋಗಿತ್ತೋ ಏನೋ. ನೆಟ್ಟಿಗರೊಬ್ಬರಂತೂ, ಬೆಳಗಿನ ಹೊತ್ತು ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ ಎಂದಿದ್ದಾರೆ. ಹಾವನ್ನು ಮತ್ತು ಹೆಂಡತಿಯನ್ನು ಹೀಗೆಲ್ಲ ಪ್ರೀತಿಸುವವರೂ ಇದ್ದಾರೆ ಎಂದಾಯಿತಲ್ಲವೆ?
ಇದನ್ನೂ ಓದಿ : Viral Video: ಏರ್ಪೋರ್ಟ್ನಲ್ಲಿ ತಪಾಸಣೆಗೆಂದು ಮಹಿಳೆಯ ಬ್ಯಾಗ್ ತೆರೆದು ನೋಡಿ ದಂಗಾದ ಸಿಬ್ಬಂದಿ, ಅಲ್ಲಿತ್ತು 22 ಜೀವಂತ ಹಾವುಗಳು
ಮುದ್ದು ಮಗುವಿನಂತೆ ಇದು ಎಷ್ಟು ನಿರಾಯಾಸವಾಗಿ ಆಕಳಿಸಿದೆಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹಾ ಇದನ್ನು ಈಗಲೇ ಎತ್ತಿಕೊಂಡು ಮಲಗಿಸಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:05 pm, Wed, 3 May 23