Whale Teeth Gift: ಈ ದೇಶದಲ್ಲಿ ಹೆಣ್ಣು ನೋಡುವ ಶಾಸ್ತ್ರವೇ ವಿಚಿತ್ರ, ವಧುವಿಗೆ ತಿಮಿಂಗಿಲದ ಹಲ್ಲು ಕೊಟ್ಟು, ಸಂಬಂಧ ಪಕ್ಕಾ ಮಾಡ್ಕೋತಾರೆ!

ಜಗತ್ತಿನಲ್ಲಿನ ಎಷ್ಟು ದೇಶಗಳಿವೆಯೋ ಅಷ್ಟೇ ವಿಭಿನ್ನವಾದ ನಂಬಿಕೆ, ಸಂಪ್ರದಾಯಗಳು ಕೂಡ ಇವೆ. ಭಾರತದಲ್ಲಿ ವಾಸಿಸುವ ಜನರು ಭಿನ್ನ ಪದ್ಧತಿಗಳನ್ನು ಹೊಂದಿದ್ದರೆ, ನಮಗೆ ಬೇರೆ ದೇಶದ ಪದ್ಧತಿಗಳು ವಿಚಿತ್ರವಾಗಿ ಕಾಣಿಸುವುದಂತೂ ಸತ್ಯ.

Whale Teeth Gift: ಈ ದೇಶದಲ್ಲಿ ಹೆಣ್ಣು ನೋಡುವ ಶಾಸ್ತ್ರವೇ ವಿಚಿತ್ರ, ವಧುವಿಗೆ ತಿಮಿಂಗಿಲದ ಹಲ್ಲು ಕೊಟ್ಟು, ಸಂಬಂಧ ಪಕ್ಕಾ ಮಾಡ್ಕೋತಾರೆ!
ತಿಮಿಂಗಿಲ

Updated on: May 04, 2023 | 11:32 AM

ಜಗತ್ತಿನಲ್ಲಿನ ಎಷ್ಟು ದೇಶಗಳಿವೆಯೋ ಅಷ್ಟೇ ವಿಭಿನ್ನವಾದ ನಂಬಿಕೆ, ಸಂಪ್ರದಾಯಗಳು ಕೂಡ ಇವೆ. ಭಾರತದಲ್ಲಿ ವಾಸಿಸುವ ಜನರು ಭಿನ್ನ ಪದ್ಧತಿಗಳನ್ನು ಹೊಂದಿದ್ದರೆ, ನಮಗೆ ಬೇರೆ ದೇಶದ ಪದ್ಧತಿಗಳು ವಿಚಿತ್ರವಾಗಿ ಕಾಣಿಸುವುದಂತೂ ಸತ್ಯ.
ಫಿಜಿ ಎಂಬುದು ಒಂದು ಸಣ್ಣ ದ್ವೀಪವಾಗಿದ್ದು, ಅಲ್ಲಿ ಅನೇಕ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಫಿಜಿಯಲ್ಲಿ ಮದುವೆ ಬಗ್ಗೆ  ಬೇರೆ ರೀತಿಯ ನಂಬಿಕೆಗಳಿವೆ.

ಇಲ್ಲಿ ಹೆಣ್ಣು ನೋಡುವ ಶಾಸ್ತ್ರವೇ ವಿಚಿತ್ರ, ವಧುವಿಗೆ ತಿಮಿಂಗಿಲದ ಹಲ್ಲುಗಳನ್ನು ಕೊಟ್ಟು ಮದುವೆಯನ್ನು ಪಕ್ಕಾ ಮಾಡಿಕೊಳ್ಳುವ ಪದ್ಧತಿ ಇದೆ. ಇಂಡಿಪೆಂಡೆಂಟ್ ನ್ಯೂಸ್ ವರದಿ ಪ್ರಕಾರ, ಜಿಯಲ್ಲಿ ಮದುವೆಗಳ ಬಗ್ಗೆ ವಿಶೇಷ ನಂಬಿಕೆ ಇದೆ, ಇದರಲ್ಲಿ ಮದುವೆಗೆ ತಿಮಿಂಗಿಲ ಹಲ್ಲು ಉಡುಗೊರೆಯಾಗಿ ಕೊಡುಗೆ ನೀಡಲಾಗುತ್ತದೆ. ಇಲ್ಲಿ ಮದುವೆಗೂ ಮುನ್ನ ಹುಡುಗ ಹುಡುಗಿಗೆ ತಿಮಿಂಗಿಲ ಮೀನಿನ ಹಲ್ಲನ್ನು ಉಡುಗೊರೆಯಾಗಿ ನೀಡುತ್ತಾನೆ.

ಮತ್ತಷ್ಟು ಓದಿ: Viral News: ಸೆಖೆ ಸೆಖೆ ಎಂದು ಫ್ರೀಜರ್​ ಬಾಗಿಲು ತೆರೆದಾಗ ಸಿಕ್ಕಿದ್ದು ಐಸ್​ಕ್ಯೂಬ್​ಗಳಲ್ಲ ಬೆಂಕಿಯ ಉಂಡೆ

ಸ್ಪರ್ಮ್ ವೇಲ್ ಹಲ್ಲುಗಳನ್ನು ಫಿಜಿಯಲ್ಲಿ ಟಬುವಾ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಹಳೆಯ ನಂಬಿಕೆ ಇದೆ. ಒಬ್ಬ ಹುಡುಗ ತನಗಾಗಿ ಹುಡುಗಿಯನ್ನು ಆರಿಸಿಕೊಂಡಾಗ, ಅವಳ ಕೈಯನ್ನು ಕೇಳುವುದರ ಜೊತೆಗೆ, ಅವನು ಹುಡುಗಿಯ ಕುಟುಂಬಕ್ಕೆ ತಿಮಿಂಗಿಲದ ಹಲ್ಲು (ಟಬುವಾ) ಉಡುಗೊರೆಯಾಗಿ ನೀಡುತ್ತಾನೆ. ಹಲ್ಲನ್ನು ಉಡುಗೊರೆಯಾಗಿ ನೀಡಿದಾಗ, ಹುಡುಗಿ ಅದನ್ನು ಸ್ವೀಕರಿಸಿದಾಗ, ಮದುವೆಯನ್ನು ಮಾತ್ರ ನಿಶ್ಚಿತವೆಂದು ಪರಿಗಣಿಸಲಾಗುತ್ತದೆ.

ಈ ದೇಶದಲ್ಲಿ ತಿಮಿಂಗಿಲ ಹಲ್ಲುಗಳನ್ನು ಉಡುಗೊರೆಯಾಗಿ ನೀಡುವುದು ಸಾಕಷ್ಟು ಸಾಮಾನ್ಯ ಅಭ್ಯಾಸವಾಗಿದೆ, ಮತ್ತು ಮದುವೆಯಲ್ಲದೆ, ಜನರು ಅಂತ್ಯಕ್ರಿಯೆಗಳು, ನಿಶ್ಚಿತಾರ್ಥಗಳು, ಜನನ ಸಮಯದಲ್ಲೂ ತಿಮಿಂಗಿಲದ ಹಲ್ಲುಗಳನ್ನು ನೀಡುತ್ತಾರೆ.

ತಬುವಾ ಎಂದರೆ ಫಿಜಿಯನ್ ಭಾಷೆಯಲ್ಲಿ ಪವಿತ್ರ ಎಂದರ್ಥ, ಯಾರೇ ಇದನ್ನು ಉಡುಗೊರೆಯಾಗಿ ನೀಡಿದರೂ ಅವರು ನಿಮ್ಮ ಮೇಲೆ ವಿಶ್ವಾಸ, ಭರವಸೆ ಇದೆ ಎಂದರ್ಥ.

ತಿಮಿಂಗಿಲದ ಹಲ್ಲಿನ ಗಾತ್ರ ಬದಲಾಗಬಹುದು, ಈ ನಂಬಿಕೆಯು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಜನರು ನಗರ ಪ್ರದೇಶದಲ್ಲಿಯೂ ಅನುಸರಿಸುತ್ತಾರೆ.

1 ಕೆಜಿ ಹಲ್ಲಿನ ಬೆಲೆ 80 ಸಾವಿರ ರೂ ಇದೆ. ಇದು ಗೌರವದ ವಿಷಯವಾಗಿರುವ ಕಾರಣ ಎಷ್ಟಾದರೂ ಹಣ ನೀಡಿ ಅದನ್ನು ಖರೀದಿಸುತ್ತಾರೆ.

ಹಲ್ಲನ್ನು ಖರೀದಿಸಿ ಸರದಂತೆ ಅದನ್ನು ನೇಯುತ್ತಾರೆ, ಜನರು ಮೃತಪಟ್ಟಿರುವ ತಿಮಿಂಗಿಲದ ಬಾಯಿಯಿಂದ ಹಲ್ಲುಗಳನ್ನು ಕೀಳುತ್ತಾರೆ. ಕೆಲವೊಮ್ಮೆ ತಿಮಿಂಗಿಲಗಳು ಸತ್ತ ಬಳಿಕ ಸಮುದ್ರದ ತೀರಕ್ಕೆ ಬಂದು ಬೀಳುತ್ತವೆ. ಆಗ ಅವುಗಳನ್ನು ತೆಗೆದುಕೊಳ್ಳಲಾಗುತ್ತದೆ. ಏನೇ ಆಗಲಿ ಬೇರೆ ದೇಶದ ಹೊಸ ಸಂಪ್ರದಾಯದ ಪರಿಚಯವಾಯಿತಲ್ಲವೇ?.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:32 am, Thu, 4 May 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us