Viral News: ಡಬ್ಬಗಳ ಮುಚ್ಚಳ ಬಿಗಿಯಾಗಿ ಮುಚ್ಚುತ್ತಾನೆಂದು ಪತಿಗೆ ಡಿವೋರ್ಸ್​​​​ ಕೊಟ್ಟ ಮಹಿಳೆ

ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾದ ಅಂಶಗಳ ಬಗ್ಗೆ ಮಹಿಳೆಯೊಬ್ಬಳು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾಳೆ. ಸದ್ಯ ಈ ಜೋಡಿಯ ಡಿವೋರ್ಸ್ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇವರ ಡಿವೋರ್ಸ್ಗೆ​​​​​ ಕಾರಣ ಕೇಳಿದರೇ ನೀವೂ ಕೂಡ ಶಾಕ್​​ ಆಗುವುದಂತೂ ಖಂಡಿತಾ.

Viral News: ಡಬ್ಬಗಳ ಮುಚ್ಚಳ ಬಿಗಿಯಾಗಿ ಮುಚ್ಚುತ್ತಾನೆಂದು ಪತಿಗೆ ಡಿವೋರ್ಸ್​​​​ ಕೊಟ್ಟ ಮಹಿಳೆ
ಡಬ್ಬಗಳ ಮುಚ್ಚಳ ಬಿಗಿಯಾಗಿ ಮುಚ್ಚುತ್ತಾನೆಂದು ಪತಿಗೆ ಡಿವೋರ್ಸ್​​​​ ಕೊಟ್ಟ ಪತ್ನಿ

Updated on: Jun 26, 2024 | 5:20 PM

ಡಬ್ಬಗಳ ಮುಚ್ಚಳ ಬಿಗಿಯಾಗಿ ಮುಚ್ಚುತ್ತಾನೆ, ಇದರಿಂದ ಪ್ರತೀ ದಿನ ಡಬ್ಬದ ಮುಚ್ಚಳ ತೆಗೆಯಲು ನಾನು ಹರಸಾಹಸ ಪಡಬೇಕಾಗುತ್ತದೆ. ಈ ವಿಷಯವಾಗಿ ಹಲವು ಬಾರಿ ನಮ್ಮಿಬ್ಬರ ನಡುವೆ ಜಗಳ ನಡೆದಿದೆ. ಈ ಕಾರಣಕ್ಕಾಗಿ ತನ್ನ ಪತಿಯಿಂದ ತಾನು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇನೆ ಎಂದು ಮಹಿಳೆಯೊಬ್ಬಳು ಕೋರ್ಟ್​​ನಲ್ಲಿ ನೀಡಿದ ದೂರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ.

ತನ್ನ ಪತಿಯೊಂದಿಗೆ ಐದು ವರ್ಷಗಳಿಂದ ಜೊತೆಗಿದ್ದು, ಆತ ಆಹಾರ ಹಾಳಾಗಬಾರದು ಎಂಬ ಕಾರಣಕ್ಕೆ ಡಬ್ಬದ ಮುಚ್ಚಳವನ್ನು ಬಿಗಿಯಾಗಿ ಮುಚ್ಚುವ ಅಭ್ಯಾಸವನ್ನು ಹೊಂದಿದ್ದಾನೆ. ಆತ ಮನೆಯಲ್ಲೇ ಇರುವಾಗ ತನಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಕೆಲಸದ ನಿಮಿತ್ತ ಹೊರಗೆ ಹೋದ ಸಂದರ್ಭದಲ್ಲಿ ಡಬ್ಬದ ಮುಚ್ಚಳ ತೆಗೆಯಲು ನಾನು ಹೆಣಗಾಡುತ್ತೇನೆ. ಕೆಲವೊಮ್ಮೆ ಹತ್ತಿರದ ಮನೆಯವರ ಸಹಾಯ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Viral News: ನರ್ಸ್​​ ಜೊತೆಗೆ ಲೈಂಗಿಕ ಸಂಭೋಗ ಮಾಡುತ್ತಿರುವಾಗಲೇ ಸಾವನ್ನಪ್ಪಿದ ರೋಗಿ

ಕಳೆದ ಐದು ವರ್ಷಗಳಿಂದ ನಾನು ಈ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದೇನೆ. ಈ ಚಿಕ್ಕ ವಿಷಯಕ್ಕೆ ನಮ್ಮಿಬ್ಬರ ನಡುವೆ ಸಾಕಷ್ಟು ಜಗಳಗಳು ನಡೆದಿವೆ. ಆದ್ದರಿಂದ ನಾನು ನಮ್ಮ ದಾಂಪತ್ಯ ಜೀವನವನ್ನು ಮುರಿಯಲು ನಿರ್ಧರಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Wed, 26 June 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us