ಯಾದಗಿರಿ ಚಿತ್ತಾಪುರ ರಸ್ತೆಯಲ್ಲಿ ಟ್ರಕ್​ ಹರಿದು 25 ಕುರಿಗಳು ಸಾವು

Edited By: ವಿವೇಕ ಬಿರಾದಾರ

Updated on: Sep 16, 2023 | 9:09 AM

ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ​ಹರಿದು 25 ಕುರಿಗಳು ಸಾವಿಗೀಡಾಗಿವೆ. ಯಾದಗಿರಿ ಸಂಚಾರ ಪೊಲೀಸರು ಟ್ರಕ್ ಚಾಲನನ್ನು ವಶಕ್ಕೆ ಪಡೆದಿದ್ದಾರೆ.

ಯಾದಗಿರಿ ಸೆ.16: ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ (Truck) ​ಹರಿದು 25 ಕುರಿಗಳು (Sheep) ಸಾವಿಗೀಡಾಗಿವೆ. ಯಾದಗಿರಿ (Yadgiri) ಸಂಚಾರ ಪೊಲೀಸರು ಟ್ರಕ್ ಚಾಲನನ್ನು ವಶಕ್ಕೆ ಪಡೆದಿದ್ದಾರೆ. ಕುರಿಗಾಯಿಗಳು ಕುರಿ ಮೇಯಿಸಲು ರಸ್ತೆ ದಾಟಿ ಹೋಗುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಟ್ರಕ್​ ಕುರಿಗಳ ಮೇಲೆ ಹರಿದಿದೆ. ಇದರಿಂದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಯಾದಗಿರಿ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published on: Sep 16, 2023 07:33 AM
Loading...
Unable to load recommendations.
Follow Us
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More