ಪಾಟ್ನಾದಲ್ಲಿ ಡಿಜಿಪಿ ಮನೆ ಬಳಿಯೇ ತನಿಷ್ಕ್ ಶೋರೂಮ್‌ನಲ್ಲಿ 5 ಲಕ್ಷ ಮೌಲ್ಯದ ಆಭರಣ ದರೋಡೆ

Updated on: Nov 11, 2024 | 6:25 PM

ಪಾಟ್ನಾದಲ್ಲಿ ಡಿಜಿಪಿ ನಿವಾಸಕ್ಕಿಂತ 200 ಮೀಟರ್ ದೂರದಲ್ಲಿಯೇ 4 ದರೋಡೆಕೋರರು 3.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದರೋಡೆಕೋರರು ಕೇವಲ 1 ನಿಮಿಷ ಮತ್ತು 40 ಸೆಕೆಂಡ್​ಗಳಲ್ಲಿ ಶೋ ರೂಂ ಅನ್ನು ಲೂಟಿ ಮಾಡಿದ್ದಾರೆ. ಕಂಕರ್‌ಬಾಗ್‌ನ ಕಾಲೋನಿ ಮೋರ್ ಪ್ರದೇಶದಲ್ಲಿರುವ ತನಿಷ್ಕ್ ಶೋರೂಮ್‌ನಲ್ಲಿ ದರೋಡೆ ನಡೆದಿದೆ.

ಪಾಟ್ನಾ: ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಶನಿವಾರ ಪಾಟ್ನಾದ ತನಿಷ್ಕ್ ಶೋರೂಮ್ ಅನ್ನು ದರೋಡೆ ಮಾಡಿದ್ದಾರೆ. ಇದು ಪಾಟ್ನಾದ ಪೊಲೀಸ್ ಮಹಾನಿರ್ದೇಶಕರ ನಿವಾಸದಿಂದ ಕೇವಲ 200 ಮೀಟರ್ ದೂರದಲ್ಲಿದೆ. ಅಪರಾಧಿಗಳು ಪರಾರಿಯಾಗುವ ಮೊದಲು 5 ಲಕ್ಷ ರೂ. ಮೌಲ್ಯದ ಆಭರಣಗಳು ಮತ್ತು 50,000 ರೂ. ನಗದು ಮತ್ತು ಉದ್ಯೋಗಿಗಳ 6 ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 11, 2024 06:23 PM
Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More