Video: ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಚೌತಾಲಾದೊಂದಿಗೆ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

Updated on: Jul 04, 2025 | 9:37 AM

ಅಪ್ಪಟ ಭಾರತೀಯ ಶೈಲಿಯಲ್ಲಿ ಭೋಜ್ಪುರಿ ಚೌತಾಲಾ(ಗೀತೆ)ದೊಂದಿಗೆ ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲಾಯಿತು. ಈ ಕುರಿತು ಖುದ್ದಾಗಿ ಮೋದಿ ಭೋಜ್ಪುರಿಯಲ್ಲೇ ಪೋಸ್ಟ್​ ಮಾಡಿದ್ದಾರೆ. ಧಾನಿ ನರೇಂದ್ರ ಮೋದಿ ತಮ್ಮ ಘಾನಾ ಭೇಟಿಯ ಎರಡನೇ ಹಂತವಾಗಿ ಬುಧವಾರ ಟ್ರಿನಿಡಾಡ್ ಮತ್ತು ಟೊಬಾಗೊಗೆ ಆಗಮಿಸಿದ್ದಾರೆ. ಅನಿವಾಸಿ ಭಾರತೀಯರು ನೃತ್ಯ, ಸಂಗೀತ ಮತ್ತು ವೇಷಭೂಷಣಗಳಲ್ಲಿ ತಮ್ಮ ಭಾರತೀಯ ಪರಂಪರೆಯನ್ನು ಪ್ರದರ್ಶಿಸಿದರು. ವಿಶೇಷವೆಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಭೋಜ್‌ಪುರಿ ಚೌತಾಲಾವನ್ನು ಪ್ರಸ್ತುತಪಡಿಸಲಾಯಿತು.

ಅಪ್ಪಟ ಭಾರತೀಯ ಶೈಲಿಯಲ್ಲಿ ಭೋಜ್ಪುರಿ ಚೌತಾಲಾ(ಗೀತೆ)ದೊಂದಿಗೆ ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲಾಯಿತು. ಈ ಕುರಿತು ಖುದ್ದಾಗಿ ಮೋದಿ ಭೋಜ್ಪುರಿಯಲ್ಲೇ ಪೋಸ್ಟ್​ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಘಾನಾ ಭೇಟಿಯ ಎರಡನೇ ಹಂತವಾಗಿ ಬುಧವಾರ ಟ್ರಿನಿಡಾಡ್ ಮತ್ತು ಟೊಬಾಗೊಗೆ ಆಗಮಿಸಿದ್ದಾರೆ. ಅನಿವಾಸಿ ಭಾರತೀಯರು ನೃತ್ಯ, ಸಂಗೀತ ಮತ್ತು ವೇಷಭೂಷಣಗಳಲ್ಲಿ ತಮ್ಮ ಭಾರತೀಯ ಪರಂಪರೆಯನ್ನು ಪ್ರದರ್ಶಿಸಿದರು. ವಿಶೇಷವೆಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಭೋಜ್‌ಪುರಿ ಚೌತಾಲಾವನ್ನು ಪ್ರಸ್ತುತಪಡಿಸಲಾಯಿತು. ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಭಾರತ, ವಿಶೇಷವಾಗಿ ಪೂರ್ವ ಯುಪಿ, ಬಿಹಾರದ ನಡುವಿನ ಗಮನಾರ್ಹ ಸಂಪರ್ಕದ ಕುರಿತು ಮಾತನಾಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More