ಡಿವೋರ್ಸ್​ಗೆ ಮುಂದಾಗಿದ್ದ ದಂಪತಿಯನ್ನು ಒಂದುಗೂಡಿಸಿದ ದೊಡ್ಡಬಳ್ಳಾಪುರ ಜೆಎಂಎಫ್​ಸಿ ನ್ಯಾಯಾಧೀಶರು

ಅರುಣ್​ ಕುಮಾರ್​ ಬೆಳ್ಳಿ

Updated on: Mar 10, 2025 | 2:24 PM

ಎಲ್ಲರ ಬದುಕಿನಲ್ಲೂ ಏರುಪೇರು, ಕಷ್ಟಸುಖ ಬರುತ್ತವೆ, ಅವುಗಳನ್ನು ಸರಿದೂಗಿಸಿಕೊಂಡು ಹೋಗುವುದರಲ್ಲೇ ದಾಂಪತ್ಯದ ಸಾರ್ಥಕತೆ ಮತ್ತು ಯಶಸ್ಸು ಅಡಗಿದೆ ಎಂದು ನ್ಯಾಯಾಧೀಶರು ನಾಗಮಣಿ ಮತ್ತು ಹನುಮಂತರಾಜುಗೆ ಹೇಳಿದರು. ದಂಪತಿ ಸಹ ಬೇರೆಯವರ ಮಾತಿಗೆ ಕಿವಿಗೊಡದೆ ನೆಮ್ಮದಿಯಿದ ಬಾಳ್ವೆ ಮಾಡಿಕೊಂಡು ಹೋಗೋದಾಗಿ ಹೇಳಿದರು. ಅವರಿಬ್ವರಿಗೆ ಒಳ್ಳೆಯದಾಗಲಿ ಅಂತ ಹಾರೈಸೋಣ.

ದೊಡ್ಡಬಳ್ಳಾಪುರ, ಮಾರ್ಚ್ 10: ಸ್ಥಳೀಯ ನಿವಾಸಿಗಳಾಗಿರುವ ನಾಗಮಣಿ ಮತ್ತು ಹನುಮಂತರಾಜು 2018ರಲ್ಲಿ ಸತಿಪತಿಯಾಗಿ ದಾಂಪತ್ಯ ಶುರುಮಾಡಿದರೂ ಯಾರದ್ದೋ ಮಾತುಕೇಳಿ ಕಳೆದ ವರ್ಷ ವಿಚ್ಛೇದನ ಕೋರಿ ಲೋಕ್ ಅದಾಲತ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರೆ, ದೊಡ್ಡಬಳ್ಳಾಪುರ ಜೆಎಂಎಫ್​ಸಿ ನ್ಯಾಯಾಧೀಶರಾಗಿರುವ ಪ್ರವೀಣ್ ಅರ್ ಜೆಎಸ್ ಅವರು ದಂಪತಿಯ ಮನವೊಲಿಸಿ ಪುನಃ ಒಂದು ಮಾಡಿ ಹೊಸದಾಗಿ ಬದುಕು ಆರಂಭಿಸುವ ಸನ್ನಿವೇಶ ಸೃಷ್ಟಿಸಿದ್ದಾರೆ. ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ದಂಪತಿ ಹಾರ ವಿನಿಮಯ ಮಾಡಿಕೊಂಡು ಸಿಹಿ ತಿನ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಂಥಾ ಕಾರಣ: ತನಗೆ ಹೇಳದೆ ಅತ್ತೆ ತನ್ನ ಮೇಕ್​ಅಪ್​ ಕಿಟ್​ ಬಳಸಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

Published on: Mar 10, 2025 02:22 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.