ಸೈಟ್ ವಿವಾದ; ಯಶ್ ತಾಯಿ ಪುಷ್ಪಾಗೆ ಮೊದಲ ಹಂತದ ಜಯ

Updated on: Feb 16, 2026 | 10:58 AM

ಯಶ್ ತಾಯಿ ಪುಷ್ಪಾ ಅವರು ಈಗ ಸೈಟ್ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ತಾವು ಖರೀದಿ ಮಾಡಿದ್ದ ಜಾಗವನ್ನು ಮತ್ತೊಬ್ಬರು ತಮ್ಮದು ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ಸೈಟ್ ವಿಷಯದಲ್ಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇದರಿಂದ ಸೈಟ್ ವಿವಾದದಲ್ಲಿ ಪುಷ್ಪಾಗೆ ಮೊದಲ ಹಂತದ ಜಯ ಸಿಕ್ಕಂತೆ ಆಗಿದೆ.

ಯಶ್ ತಾಯಿ ಪುಷ್ಪಾ ಅವರು ಹಾಸನದಲ್ಲಿ ಸೈಟ್ ಒಂದನ್ನು ಖರೀದಿ ಮಾಡಿದ್ದರು. ಇದು ವಿವಾದಕ್ಕೆ ಸಿಲುಕಿತ್ತು. ಲಕ್ಷ್ಮಮ್ಮ ಅನ್ನೋರು ಸೈಟ್ ತಮ್ಮದು ಎಂದು ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಪುಷ್ಪಾ ಕೋರ್ಟ್​​ಗೆ ಹೋಗಿದ್ದರು. ಕೋರ್ಟ್​ ಅಲ್ಲಿ ಯಶ್ ತಾಯಿಗೆ ಮೊದಲ ಹಂತದ ಗೆಲುವು ಸಿಕ್ಕಿದೆ. ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ಕೋರ್ಟ್​ ತಡೆ ನೀಡಿದೆ.

ಲಕ್ಷ್ಮಮ್ಮ ಪರವಾಗಿ ಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಪುಷ್ಪಾ ಅವರು, ‘ತಮ್ಮನ್ನ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಮಾಡಲಾಗಿದೆ’ ಎಂದು ಕೇಸ್ ದಾಖಲು ಮಾಡಿದ್ದರು. ಈಗ ದಾಖಲಾಗಿರೊ ದಾವೆ ಇತ್ಯರ್ಥ ಆಗೋವರೆಗೂ ವಿವಾದಿತ ಪ್ರಾಪರ್ಟಿಯನ್ನ ಪರವಾರೆ ಅಥವಾ ಮೂಲ ಸ್ವರೂಪ ಬದಲಾವಣೆ ಮಾಡದಂತೆ ಅರ್ಜಿದಾರರಿಗೂ ನಿರ್ಬಂಧ ಹೇರಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More