Video: ರೈಲ್ವೆ ಹಳಿಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ರೈಲು, ಭಯಾನಕ ವಿಡಿಯೋ

Updated on: Jan 23, 2026 | 10:08 AM

ರೈಲ್ವೆ ಕ್ರಾಸಿಂಗ್​ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು.

ಜಾರ್ಖಂಡ್, ಜನವರಿ 23: ರೈಲ್ವೆ ಕ್ರಾಸಿಂಗ್​ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು.

ರೈಲು ಡಿಕ್ಕಿ ಹೊಡೆದು ತಳ್ಳಿದ ಪರಿಣಾಮ ಟ್ರಕ್​ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಜಸಿದಿಹ್-ಅಸನ್ಸೋಲ್ ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More