ಜೆಡಿ(ಎಸ್) ಪಕ್ಷದ ಪಂಚರತ್ನ ಯಾತ್ರೆಯಲ್ಲಿ ಟಿ-ಶರ್ಟ್ ಗಳ ಮೇಳ, ಒಬ್ಬ 3 ಪಡೆದು ಒಂದರ ಮೇಲೊಂದು ಧರಿಸಿದ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Dec 06, 2022 | 2:17 PM

ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ತುಮಕೂರು: ಜೆಡಿ(ಎಸ್) ಮುಖಂಡ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ (Pancharatna Yatre) ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪ್ರವೇಶಿಸಿದೆ. ಯಾತ್ರೆಯಲ್ಲಿ ಟಿ ಶರ್ಟ್ (T-shirt) ಮೇಳವೂ ನಡೆಯುತ್ತಿದೆ ಮಾರಾಯ್ರೇ. ವಿಷಯವೇನೆಂದರೆ, ಜೆಡಿ(ಎಸ್) ಪಕ್ಷದ ಚಿಹ್ನೆ ಮತ್ತು ಕುಮಾರಸ್ವಾಮಿ ಹಾಗೂ  ಹೆಚ್ ಡಿ ದೇವೇಗೌಡರ ಚಿತ್ರಗಳಿರುವ ಟಿ ಶರ್ಟ್ ಗಳನ್ನು ಬೆಂಬಲಿಗರಿಗೆ ಹಂಚಲಾಗುತ್ತಿದೆ. ಉಚಿತ ಶರ್ಟ್ ಗಳಿಗಾಗಿ ಯುವಕರು ಮುಗಿ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಬ್ಬ ಯುವಕನಂತೂ 3 ಟಿ ಶರ್ಟ್ ಗಳನ್ನು ಪಡೆದು ಅಥವಾ ಕಸಿದುಕೊಂಡು ಒಂದರ ಮೇಲೊಂದು ಹಾಕಿಕೊಳ್ಳುತ್ತಿರುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More