ಅಭಿ-ಅವಿವಾ ಮದುವೆಗೆ ಅಂಬಿ ಮನೆ ಮುಂದೆ ಚಪ್ಪರದ ತಂಪು, ಹೇಗೆ ನಡೆಯಿತು ಚಪ್ಪರ ಪೂಜೆ?

Updated on: Jun 04, 2023 | 11:30 PM

Abhishek Aviva: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ್ಪ ಅವರ ಮದುವೆ ಕಾರ್ಯಗಳು ಆರಂಭವಾಗಿದ್ದು, ಭಾನುವಾರದಂದು ಚಪ್ಪರ ಪೂಜೆ ನೆರವೇರಿದೆ. ಅಂಬರೀಶ್ ಮನೆಯ ಮುಂದೆ ಹೀಗೆ ಕಲಾತ್ಮಕವಾಗಿ ಚಪ್ಪರವನ್ನು ಹಾಕಲಾಗಿತ್ತು.

ಅಂಬರೀಶ್-ಸುಮಲತಾ (Ambareesh-Sumalatha) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿಡಪ್ಪ (Aviva Bidappa) ಅವರ ವಿವಾಹ ಜೂನ್ 5 ರಂದು ನಡೆಯಲಿದ್ದು ಇಂದು ಅಂದರೆ ಜೂನ್ 4 ರಂದು ಚಪ್ಪರ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನಲ್ಲಿನ ಅಂಬಿ ಮನೆಯ ಮುಂದೆ ಅದ್ಧೂರಿಯಾಗಿ ಚಪ್ಪರ ಹಾಕಲಾಗಿದ್ದು, ಚಪ್ಪರದ ಪೂಜೆ ಸಹ ನಡೆದಿದೆ. ಚಪ್ಪರ ಹಾಕುವುದರಲ್ಲಿ ನೈಪುಣ್ಯತೆ ಹೊಂದಿರುವವರು ಕಲಾತ್ಮಕವಾಗಿ ಅಂಬಿ ಮನೆಗೆ ಚಪ್ಪರ ಹಾಕಿದ್ದಾರೆ. ಜೂನ್ 05 ರಂದು ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ಮದುವೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More