ಕಲಬುರಗಿಯ ಸರಾಫ್ ಅಂಗಡಿಯಲ್ಲಿ ಕಳ್ಳಿಯರು ಬಳೆ ಲಪಟಾಯಿಸಿದ್ದು ಯಾರೂ ನೋಡಲಿಲ್ಲ ಅದರೆ ಸಿಸಿಟಿವಿ ಅವರ ಕೃತ್ಯ ಸೆರೆಹಿಡಿಯಿತು!

ಅರುಣ್​ ಕುಮಾರ್​ ಬೆಳ್ಳಿ

Updated on: Nov 23, 2023 | 10:53 AM

ಬಳೆ ಲಪಟಾಯಿಸಿದ ಮಹಿಳೆ ಅದನ್ನ್ನು ಬಚ್ಚಿಟ್ಟುಕೊಳ್ಳುವ ಮೊದಲು ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತ ಸುತ್ತಮುತ್ತ ನೋಡುತ್ತಾಳೆ. ಯಾರೂ ನೋಡಲಿಲ್ಲ ನಿಜ ಅದರೆ ಕೆಮೆರಾ ಆಕೆಯ ಸಂಪೂರ್ಣ ಕೃತ್ಯ ಸೆರೆಹಿಡಿಯಿತು. ದೃಶ್ಯಗಳನ್ನು ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಬುರಗಿ: ಇಂಥ ದೃಶ್ಯಗಳು ಕೇವಲ ಬೆಂಗಳೂರುನಂಥ (Bengaluru) ಮಹಾನಗರಗಳಿಗೆ ಸೀಮಿತವಾಗಿರುತ್ತವೆ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ಕಲಬುರಗಿಯ (Kalaburagi) ಚಿನ್ನಾಭರಣಗಳ ಅಂಗಡಿಯೊಂದರಲ್ಲಿ (jewelry shop) ಅಳವಡಿಸಲಾಗಿದ್ದ ಕೆಮೆರಾದಲ್ಲಿ ಸೆರೆಯಾಗಿರುವ ದೃಶ್ಯ. ಅಂಗಡಿಯ ಸೇಲ್ಸ್ ಮನ್ ಮತ್ತೊಬ್ಬ ಗ್ರಾಹಕರಿಗೆ ಆಭರಣಗಳನ್ನು ತೋರಿಸುವಾಗ ಅವರ ಗಮನ ತಮ್ಮ ಮೇಲಿಲ್ಲ ಅನ್ನೋದನ್ನು ಖಾತರಿ ಪಡಿಸಿಕೊಳ್ಳುವ ಇಬ್ಬರು ಚಾಲಾಕಿ ಕಳ್ಳಿಯರು ಒಂದು ಜೊತೆ ಚಿನ್ನದ ಬಳೆಯನ್ನು ಬೆಣ್ಣೆಯಿಂದ ಕೂದಲನ್ನು ತೆಗೆಯುವಷ್ಟೇ ಸಲೀಸಾಗಿ ತೆಗೆದು ಬುರ್ಖಾದೊಳಗೆ ಅಡಗಿಸಿಕೊಳ್ಳುತ್ತಾರೆ. ಕೈಚಳಕವೆಲ್ಲ ಆ ಪಕ್ಕ ಕುಳಿತಿತುವ ಮಹಿಳೆಯದ್ದು. ಇನ್ನೊಬ್ಬ ಮಹಿಳೆ ಸೇಲ್ಸ್ ಮನ್ ನನ್ನು ಮಾತಿನಲ್ಲಿ ತೊಡಗಿಸುತ್ತಾಳೆ. ಬಳೆ ಲಪಟಾಯಿಸಿದ ಮಹಿಳೆ ಅದನ್ನ್ನು ಬಚ್ಚಿಟ್ಟುಕೊಳ್ಳುವ ಮೊದಲು ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತ ಸುತ್ತಮುತ್ತ ನೋಡುತ್ತಾಳೆ. ಯಾರೂ ನೋಡಲಿಲ್ಲ ನಿಜ ಅದರೆ ಕೆಮೆರಾ ಆಕೆಯ ಸಂಪೂರ್ಣ ಕೃತ್ಯ ಸೆರೆಹಿಡಿಯಿತು. ದೃಶ್ಯಗಳನ್ನು ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.