Karnataka Assembly Polls: ಬಿಜೆಪಿ ಪರ ಪ್ರಚಾರ ಶುರುಮಾಡಿರುವ ಕಿಚ್ಚ ಸುದೀಪ್ ಇಂದು ಮೊಳಕಾಲ್ಮೂರುಗೆ ಸಿನಿಮೀಯ ಶೈಲಿಯಲ್ಲಿ ಆಗಮನ!

ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2023 | 12:49 PM

ನೀಲಿ ಜೀನ್ಸ್ , ಬಿಳಿ ಟೀ ಶರ್ಟ್ ಮೇಲೊಂದು ಅಂಗಿ ಧರಿಸಿದ್ದ ಅವರನ್ನು ನೋಡಿದರೆ ಫಿಲಂ ಶೂಟ್ ಗೆ ಬಂದಿದ್ದಾರೇನೋ ಎನಿಸದಿರದು.

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪ್ರಾಮಿಸ್ ಮಾಡಿದಂತೆ ನಟ ಕಿಚ್ಚ ಸುದೀಪ್ (Kiccha Sudeep) ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ತಾನು ಮಾಮ ಎಂದು ಕರೆಯುವ ಬೊಮ್ಮಾಯಿ ಅವರು ಹೇಳುವ ಎಲ್ಲ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡುವುದಾಗಿ ಹೇಳಿರುವ ಸುದೀಪ್ ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು (Molakalmuru) ವಿಧಾನಸಭಾ ಕ್ಷೇತ್ರಕ್ಕೆ ಮಿರ ಮಿರ ಮಿಂಚುವ ಕಪ್ಪುವರ್ಣದ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಚುನಾವಣೆಗೆಂದು ಅವರ ಗೆಟಪ್ ನಲ್ಲಿ ಬದಲಾವಣೆಯೇನೂ ಇಲ್ಲ. ನೀಲಿ ಜೀನ್ಸ್ , ಬಿಳಿ ಟೀ ಶರ್ಟ್ ಮೇಲೊಂದು ಅಂಗಿ ಧರಿಸಿದ್ದ ಅವರನ್ನು ನೋಡಿದರೆ ಫಿಲಂ ಶೂಟ್ ಗೆ ಬಂದಿದ್ದಾರೇನೋ ಎನಿಸದಿರದು. ರಾಜಕಾರಣಿಗಳು ಚಾಪರ್ ನಿಂದ ಕೆಳಗಿಳಿಯಬೇಕಾದರೆ ಹರಸಾಹಸ ಪಡುತ್ತಾರೆ. ಆದರೆ, ಹೆಲಿಕಾಪ್ಟರ್ ಲ್ಯಾಂಡ್ ಆದ ಮೇಲೆ ಸುದೀಪ್ ಸಿನಿಮೀಯ ಶೈಲಿಯಲ್ಲೇ ಅದರಿಂದ ಹೊರಗೆ ಚಂಗನೆ ಜಿಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.