‘62 ವರ್ಷ ಆಯ್ತು, ಇನ್ನೂ ರಾಜಕೀಯ ಅರ್ಥ ಆಗಿಲ್ಲ ಅಂದ್ರೆ ಹೇಗೆ?’; ಶಿವರಾಜ್​ಕುಮಾರ್ ಮಾತು

Updated on: Mar 25, 2024 | 11:39 AM

ರಾಜಕೀಯದಲ್ಲಿ ಕೆಸರೆರೆಚಾಟ ಸಾಮಾನ್ಯ. ಕೇವಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರಿಗೆ ಮಾತ್ರವಲ್ಲ ಅವರ ಪರ ಪ್ರಚಾರ ಮಾಡುವವರಿಗೂ ಟೀಕೆ ಕಟ್ಟಿಟ್ಟ ಬುತ್ತಿ. ಶಿವರಾಜ್​ಕುಮಾರ್ ಚುನಾವಣಾ ಪ್ರಚಾರ ಮಾಡುತ್ತಿರುವುದನ್ನು ಕೆಲವರು ಟೀಕಿಸಿದ್ದಾರೆ. ಈ ವಿಚಾರವಾಗಿ ಶಿವಣ್ಣನಿಗೆ ಪ್ರಶ್ನೆ ಎದುರಾಗಿದೆ.

ರಾಜಕೀಯದಲ್ಲಿ ಕೆಸರೆರೆಚಾಟ ಸಾಮಾನ್ಯ. ಕೇವಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರಿಗೆ ಮಾತ್ರವಲ್ಲ ಅವರ ಪರ ಪ್ರಚಾರ ಮಾಡುವವರಿಗೂ ಟೀಕೆ ಕಟ್ಟಿಟ್ಟ ಬುತ್ತಿ. ಶಿವರಾಜ್​ಕುಮಾರ್ (Shivarajkumar) ಚುನಾವಣಾ ಪ್ರಚಾರ ಮಾಡುತ್ತಿರುವುದನ್ನು ಕೆಲವರು ಟೀಕಿಸಿದ್ದಾರೆ. ಈ ವಿಚಾರವಾಗಿ ಶಿವಣ್ಣನಿಗೆ ಪ್ರಶ್ನೆ ಎದುರಾಗಿದೆ. ರಾಜಕೀಯ ಅರ್ಥವಾಗಿದೆಯೇ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ವಯಸ್ಸು 62 ಆಗಿದೆ. ವೋಟ್ ಹಾಕೋಕೆ ಪ್ರಾರಂಭಿಸಿ 42 ವರ್ಷಗಳು ಕಳೆದಿವೆ. ಈಗಲೂ ರಾಜಕೀಯ ಅರ್ಥ ಆಗಿಲ್ಲ ಅಂದರೆ ಹೇಗೆ?’ ಎಂದು ಶಿವರಾಜ್​ಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ‘ಪಾಲಿಟಿಕ್ಸ್​ ಎಂದರೆ ಮೈಂಡ್​ಗೇಮ್ ಅಲ್ಲ. ಇದಕ್ಕೆ ಹೃದಯವಂತಿಕೆ ಬೇಕು ಅದಕ್ಕೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More