ಹಿರಿಯ ನಟಿ ಲೀಲಾವತಿ ವೈಕುಂಠ ಸಮಾರಾಧನೆಗೆ ಸಿದ್ಧತೆ; ಇಲ್ಲಿದೆ ವಿಡಿಯೋ

Updated on: Dec 18, 2023 | 10:39 AM

ಇಂದಿನ ಕಾರ್ಯವನ್ನು ಮಗ ವಿನೋದ್ ರಾಜ್ ಅವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 12.30ರ ನಂತರ ಪೂಜಾ ಕಾರ್ಯ ಆರಂಭ ಆಗಲಿದೆ. ಕುಟುಂಬದವರು, ಕಲಾವಿದರು, ಗಣ್ಯರು, ಆಪ್ತರು ಲೀಲಾವತಿ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಹಿರಿಯ ನಟಿ ಲೀಲಾವತಿ ಅವರು ನಮ್ಮನ್ನು ಅಗಲಿ 11 ದಿನ ಕಳೆದಿದೆ. ಇಂದು (ಡಿಸೆಂಬರ್ 18) ಅವರ ವೈಕುಂಠ ಸಮಾರಾಧನೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ 8ರಂದು ಲೀಲಾವತಿ (Leelavathi) ನಮ್ಮನ್ನು ಅಗಲಿದ್ದರು. ನೆಲಮಂಗಲ ಬಳಿಯ ಸೋಲದೇವನಹಳ್ಳಿಯ ಲೀಲಾವತಿ‌ ನಿವಾಸದಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ. ಇಂದಿನ ಕಾರ್ಯವನ್ನು ಮಗ ವಿನೋದ್ ರಾಜ್ ಅವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 12.30ರ ನಂತರ ಪೂಜಾ ಕಾರ್ಯ ಆರಂಭ ಆಗಲಿದೆ. ಕುಟುಂಬದವರು, ಕಲಾವಿದರು, ಗಣ್ಯರು, ಆಪ್ತರು ಲೀಲಾವತಿ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸಮಾಧಿಗೆ ಈಗಾಗಲೇ ಹೂವಿನ ಹಾರದಿಂದ ಅಲಂಕಾರ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Dec 18, 2023 10:38 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More