ತಮಿಳುನಾಡಿನಲ್ಲಿ ಟಿವಿಕೆ ಸುನಾಮಿ; ತಿರುಪತಿಯಿಂದ ನೇರವಾಗಿ ವಿಜಯ್ ಮನೆಗೆ ಬಂದ ತ್ರಿಷಾ

Updated on: May 04, 2026 | 2:27 PM

ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ ಸುನಾಮಿ ಎಬ್ಬಿಸಿದೆ. ದಳಪತಿ ವಿಜಯ್ ಅವರು ಸಿಎಂ ಆಗೋದು ಬಹುತೇಲ ಖಚಿತವಾಗಿದೆ. ಮಧ್ಯಾಹ್ನ 2 ಗಂಟೆ ಟ್ರೆಂಡ್ ಅಲ್ಲಿ ವಿಜಯ್ ಪಕ್ಷ 112 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ವಿಜಯ್ ಅವರ ಸಾಧನೆ. ಈಗ ವಿಜಯ್ ಮನೆಗೆ ತ್ರಿಷಾ ಆಗಮಿಸಿ, ವಿಶ್ ಮಾಡಿದ್ದಾರೆ. ಇದು ವಿಜಯ್ ಹಾಗೂ ತ್ರಿಷಾ ಬಾಂಧವ್ಯವವನ್ನು ಹೇಳುತ್ತದೆ.

ದಳಪತಿ ವಿಜಯ್ ಅವರ ‘ಟಿವಿಕೆ’ ಪಕ್ಷ ತಮಿಳುನಾಡು ರಾಜಕೀಯದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಈ ಪಕ್ಷ ಮಧ್ಯಾಹ್ನದ 2 ಗಂಟೆ ಟ್ರೆಂಡ್ ಅಲ್ಲಿ 112 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇದು ವಿಜಯ್ ಪಕ್ಷ ಮಾಡಿದ ಸಾಧನೆ. ವಿಜಯ್ ಪಕ್ಷದ ಗೆಲುವಿನ ಬೆನ್ನಲ್ಲೇ ತ್ರಿಷಾ ಅವರು ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಜಾನೆ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಆ ಬಳಿಕ ಅವರು ನೇರವಾಗಿ ವಿಜಯ್ ಮನೆಗೆ ಬಂದಿದ್ದಾರೆ. ವಿಶೇಷ ಎಂದರೆ, ಇಂದು ತ್ರಿಷಾ ಅವರ ಜನ್ಮದಿನ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More