೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!

Updated on: Feb 09, 2026 | 10:32 AM

New Zealand vs Afghanistan: ಅಫ್ಘಾನಿಸ್ತಾನ್ ತಂಡದ 180+ ರನ್​ಗಳ ಗೆಲುವಿನ ನಾಗಾಲೋಟಕ್ಕೆ ತೆರೆ ಬಿದ್ದಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ಟಿ20 ಕ್ರಿಕೆಟ್​ನಲ್ಲಿ 26 ಮ್ಯಾಚ್​ಗಳಲ್ಲಿ 180 ಕ್ಕಿಂತ ಸ್ಕೋರ್​ಗಳಿಸಿದ್ದಾರೆ. ಈ ವೇಳೆ 25 ಬಾರಿ ಗೆಲುವು ದಾಖಲಿಸಿದ್ದರು. ಇದೀಗ 26ನೇ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.

ಟಿ20 ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನ್ ತಂಡವು ಈವರೆಗೆ 160 ಪಂದ್ಯಗಳನ್ನಾಡಿದೆ. ಈ 160 ಮ್ಯಾಚ್​ಗಳಲ್ಲಿ ಸೋತಿರುವುದು ಕೇವಲ 61 ಪಂದ್ಯಗಳಲ್ಲಿ ಮಾತ್ರ. ಇನ್ನು 96 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ 25 ಗೆಲುವುಗಳನ್ನು ಅಮೋಘ ಜಯ ಎನ್ನಬಹುದು.

ಏಕೆಂದರೆ ಅಫ್ಘಾನಿಸ್ತಾನ್ ತಂಡವು 180+ ರನ್​ಗಳಿಸಿದಾಗ ಹೊಸ ಚರಿತ್ರೆಯೇ ಇರಲಿಲ್ಲ. ಬೃಹತ್ ಮೊತ್ತ ಪೇರಿಸಿದರೆ ಈ ಪಂದ್ಯವನ್ನು ಅಫ್ಘಾನ್ ಬೌಲರ್​ಗಳು ಗೆಲ್ಲಿಸಿಕೊಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ 180+ ರನ್​ಗಳಿಸಿ ಸೋಲನುಭವಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 20 ಓವರ್​ಗಳಲ್ಲಿ ಬರೋಬ್ಬರಿ 182 ಕಲೆಹಾಕಿದ್ದರು. ಈ ಗುರಿಯನ್ನು ನ್ಯೂಝಿಲೆಂಡ್ ತಂಡ 17.5 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಇದರೊಂದಿಗೆ ಅಫ್ಘಾನಿಸ್ತಾನ್ ತಂಡದ 180+ ರನ್​ಗಳ ಗೆಲುವಿನ ನಾಗಾಲೋಟಕ್ಕೆ ತೆರೆ ಬಿದ್ದಿದೆ. ಅಂದರೆ ಅಫ್ಘಾನಿಸ್ತಾನ್ ತಂಡವು ಟಿ20 ಕ್ರಿಕೆಟ್​ನಲ್ಲಿ 26 ಮ್ಯಾಚ್​ಗಳಲ್ಲಿ 180 ಕ್ಕಿಂತ ಸ್ಕೋರ್​ಗಳಿಸಿದ್ದಾರೆ. ಈ ವೇಳೆ 25 ಬಾರಿ ಗೆಲುವು ದಾಖಲಿಸಿದ್ದರು. ಇದೀಗ 26ನೇ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.

 

 

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More