ಗಂಗಾವತಿಗೆ ಶಿಫ್ಟ್ ಅಗಿರುವ ಜನಾರ್ಧನ ರೆಡ್ಡಿ ಕನಕಗಿರಿ ರಸ್ತೆಯಲ್ಲಿ ಐಷಾರಾಮಿ ಬಂಗ್ಲೆಯನ್ನು ಕಟ್ಟಿಸಿಕೊಂಡಿದ್ದಾರೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Dec 05, 2022 | 3:12 PM

ಮನೆಗೆ ಭೇಟಿ ನೀಡುವವರ ಜೊತೆ ಕುಳಿತು ಮಾತಾಡಲು ವಿಶಾಲವಾದ ಹಾಲ್ ಕಟ್ಟಿಸಲಾಗಿದೆ. ಗೃಹಶಾಂತಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗಿದೆ.

ಕೊಪ್ಳಳ:  ಇದು ಅತ್ಯಾಧುನಿಕ ಸೌಲಭ್ಯಗಳುಳ್ಳ ವಿಸ್ತಾರವಾದ ಐಷಾರಾಮಿ ಬಂಗ್ಲೆ (luxury villa) ಯಾರದ್ದು ಅಂತ ಯೋಚಿಸುತ್ತಿದ್ದೀರಾ? ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (G Janardhan Reddy) ಅವರು ಬಳ್ಳಾರಿಯಿಂದ ಹೊರಬಂದು ಗಂಗಾವತಿಯಲ್ಲಿ (Gangavati) ಈ ಪಾಟಿ ಮನೆ ಕಟ್ಟಿಸಿಕೊಂಡಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಕನಕಗಿರಿ ರಸ್ತೆಯಲ್ಲಿ ಮನೆಯನ್ನು ಸುಮಾರು 3 ಎಕರೆ ಜಾಗದಲಲ್ಲಿ ನಿರ್ಮಿಸಲಾಗಿದ್ದು 5 ಬೆಡ್ ರೂಮ್ ಮತ್ತು 3 ಹಾಲ್ ಗಳಿವೆ. ಮನೆಗೆ ಭೇಟಿ ನೀಡುವವರ ಜೊತೆ ಕುಳಿತು ಮಾತಾಡಲು ವಿಶಾಲವಾದ ಹಾಲ್ ಕಟ್ಟಿಸಲಾಗಿದೆ. ಗೃಹಶಾಂತಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More