ಗೊತ್ತಿದ್ದೂ ತಪ್ಪು ಮಾಡಿದ ‘ಹಳ್ಳಿ ಪವರ್’ ಸ್ಪರ್ಧಿಗಳು; ಸಿಟ್ಟಲ್ಲಿ ಶೋನಿಂದ ಹೊರ ನಡೆದ ಅಕುಲ್ ಬಾಲಾಜಿ
ಅಕುಲ್ ಬಾಲಾಜಿ ಅವರು ‘ಹಳ್ಳಿ ಪವರ್’ ಶೋ ನಡೆಸಿಕೊಡುತ್ತಾ ಇದ್ದಾರೆ. ಈ ಶೋ ಸಾಕಷ್ಟು ಗಮನ ಸೆಳೆದಿದೆ. ಹೀಗಿರುವಾಗಲೇ ಅಕುಲ್ ಬಾಲಾಜಿ ಅವರು ಶೋನಿಂದ ಅರ್ಧಕ್ಕೆ ಹೊರ ನಡೆದ ಘಟನೆ ನಡೆದಿದೆ. ಇದಕ್ಕೆ ಕಾರಣ ಆಗಿದ್ದು ಸ್ಪರ್ಧಿಗಳ ನಡೆ. ಆ ಬಗ್ಗೆ ಇಲ್ಲಿದೆ ವಿವರ.
‘ಹಳ್ಳಿ ಪವರ್’ ಶೋಗೆ ಅಕುಲ್ ಬಾಲಾಜಿ ನೇತೃತ್ವ ಇದೆ. ಈಗ ಸ್ಪರ್ಧಿಗಳು ಗೊತ್ತಿದ್ದೂ ತಪ್ಪು ಮಾಡಿದ್ದಾರೆ. ಸ್ನೇಹಾ ಶೆಟ್ಟಿ ಅವರು ಶೋ ನಡೆಯೋ ಜಾಗಕ್ಕೆ ಮನೆಯವರನ್ನು ಕರೆಸಿಕೊಂಡಿದ್ದಾರೆ. ಇನ್ನು ಆ್ಯಶ್ ಮೆಲೋ ಸ್ಕೈಲರ್, ‘ಈ ಶೋ ನನಗಲ್ಲ’ ಎಂದಿದ್ದಾರೆ. ಇದರಿಂದ ಅಕುಲ್ ಸಿಟ್ಟಾಗಿದ್ದಾರೆ. ಅವರು ಸಿಟ್ಟಲ್ಲಿ ಅರ್ಧಕ್ಕೆ ಹೊರ ನಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.