ಅಪ್ಪು ಜೊತೆ ನಟಿಸಬೇಕೆಂಬ ಆಸೆ ಇತ್ತಂತೆ ಅಮೃತಾ ಐಯ್ಯರ್​ಗೆ

Updated on: Jan 06, 2024 | 10:42 PM

Amritha Aiyer: ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಹನುಮಾನ್’ನಲ್ಲಿ ನಾಯಕಿ ಆಗಿ ನಟಿಸಿರುವ ಕನ್ನಡದ ನಟಿ ಅಮೃತಾ, ಅಪ್ಪು ಜೊತೆಗೆ ನಟಿಸಬೇಕೆಂಬ ಆಸೆ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಿಂದ (Tollywood) ಹೊರಬರುತ್ತಿರುವ ‘ಹನುಮಾನ್’ ಪ್ಯಾನ್ ಇಂಡಿಯಾ (Pan India) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳು ಈಗಾಗಲೇ ಹಲವರನ್ನು ಸೆಳೆದಿದೆ. ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಅಯ್ಯರ್ ನಟಿಸಿದ್ದಾರೆ. ಈಕೆ ಕನ್ನಡದ ನಟಿ ಎಂಬುದು ವಿಶೇಷ. ಈ ಹಿಂದೆ ವಿನಯ್ ರಾಜ್​ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಆ ಸಿನಿಮಾ ಅರ್ಧಕ್ಕೆ ನಿಂತ ಕಾರಣ ಸಿನಿಮಾದಿಂದ ಹೊರ ನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More