Apple iOS 17: ಆ್ಯಪಲ್ ಐಫೋನ್​ಗೆ ಬರುತ್ತಿದೆ ಹೊಸ ಐಓಎಸ್ 17

ಕಿರಣ್​ ಐಜಿ Edited By:

Updated on: Jun 07, 2023 | 12:09 PM

ಆ್ಯಪಲ್ WWDC 2023 ಈವೆಂಟ್​ನಲ್ಲಿ ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ iOS 17 ಬಿಡುಗಡೆ ಆಗಿದೆ. ಇದರಲ್ಲಿ ಫೇಸ್‌ಟೈಮ್‌ ಅಪ್‌ಡೇಟ್‌ ನೀಡಲಾಗಿದ್ದು, ಲೈವ್‌ ವಾಯ್ಸ್​ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ. ಮೆಸೇಜ್‌ ಆ್ಯಪ್‌ನಲ್ಲಿ ಆ್ಯಪಲ್ ಸರ್ಚ್‌ ಫೀಚರ್ ಲಭ್ಯವಾಗುತ್ತಿದೆ. ಜತೆಗೆ‘ಚೆಕ್ ಇನ್’ ಎಂಬ ಸುರಕ್ಷತಾ ಫೀಚರ್ ಅನ್ನು ಮೆಸೇಜ್​ಗೆ ಸೇರ್ಪಡೆ ಮಾಡಲಾಗಿದೆ.

ಆ್ಯಪಲ್ WWDC 2023 ಈವೆಂಟ್​ನಲ್ಲಿ ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ iOS 17 ಬಿಡುಗಡೆ ಆಗಿದೆ. ಇದರಲ್ಲಿ ಫೇಸ್‌ಟೈಮ್‌ ಅಪ್‌ಡೇಟ್‌ ನೀಡಲಾಗಿದ್ದು, ಲೈವ್‌ ವಾಯ್ಸ್​ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ. ಮೆಸೇಜ್‌ ಆ್ಯಪ್‌ನಲ್ಲಿ ಆ್ಯಪಲ್ ಸರ್ಚ್‌ ಫೀಚರ್ ಲಭ್ಯವಾಗುತ್ತಿದೆ. ಜತೆಗೆ‘ಚೆಕ್ ಇನ್’ ಎಂಬ ಸುರಕ್ಷತಾ ಫೀಚರ್ ಅನ್ನು ಮೆಸೇಜ್​ಗೆ ಸೇರ್ಪಡೆ ಮಾಡಲಾಗಿದೆ. ನೀವು ನಿಗದಿತ ಸ್ಥಳವನ್ನು ಸುರಕ್ಷಿತವಾಗಿ ತಲುಪಿದಾಗ ಇದು ನಿಮ್ಮ ಕುಟುಂಬದ ನಂಬಿಕಸ್ಥ ಸದಸ್ಯರು ಅಥವಾ ಸ್ನೇಹಿತರಿಗೆ ನೋಟಿಫಿಕೇಷನ್‌ ನೀಡುತ್ತದೆ. ಎಲ್ಲಾದರೂ ನೀವು ಮೂವ್‌ ಆಗುತ್ತಿಲ್ಲ ಎಂದಾದರೆ ಈ ಸದಸ್ಯರಿಗೆ ನಿಮ್ಮ ಸಾಧನದ ಲೊಕೆಷನ್‌, ಬ್ಯಾಟರಿ ಲೆವೆಲ್‌ ಇತ್ಯಾದಿಗಳನ್ನು ತೋರಿಸುತ್ತದೆ. ಇಂತಹ ಹಲವು ಫೀಚರ್‌ಗಳು ನೂತನ ಅಪ್‌ಡೇಟ್‌ನಲ್ಲಿ ನೀಡಲಾಗಿದೆ. ಸೆಪ್ಟೆಂಬರ್​ನಲ್ಲಿ ನೂತನ ಐಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.

Published on: Jun 07, 2023 11:52 AM
Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.