ಸಚಿವನಾಗಿ ನಾನೇ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ, ಅವರಿಗೆಲ್ಲ ಪಾಸ್ ಕೊಟ್ಟವರು ಯಾರು? – ಸಚಿವ ಜಮೀರ್ ಅಹ್ಮದ್ ಖಡಕ್ ಪ್ರಶ್ನೆ

| Updated By: ಸಾಧು ಶ್ರೀನಾಥ್​

Updated on: Dec 16, 2023 | 11:01 AM

ಮಂತ್ರಿ, ಎಂಎಲ್‌ಗಳು ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆ ಇವೆ. ಹಾಗಾದರೆ ಆ ಹುಡುಗರು ಹೇಗೆ ಒಳಗೆ ಹೋದರು? ರಾಜ್ಯದ ಮುಖ್ಯಮಂತ್ರಿಗಳೇ ಪ್ರಧಾನಿ ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆ ಇವೆ. ಸಚಿವನಾಗಿ ನಾನೇ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವರು ಹೇಗೆ ಹೋದರು? ಅಂತಾ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ, ಡಿಸೆಂಬರ್​ 15: ಸಂತಸ್ ಭವನದಲ್ಲಿ ಸ್ಮೋಕ್ ಬಾಂಬ್ (Smoke bomb)​ ದಾಳಿ ವಿಚಾರವಾಗಿ ಧಾರವಾಡದಲ್ಲಿ ಸಚಿವ ಜಮೀರ್ ಅಹ್ಮದ್ (Minister BZ Zameer Ahmed Khan) ತಿರುಗೇಟು ನೀಡಿದ್ದಾರೆ. ಇದು ಕಾಂಗ್ರೆಸ್ ಕುತಂತ್ರ ಅಂತಾ ಆರೋಪಗಳ ಬಗ್ಗೆ ಮಾತನಾಡಟಿದ ಅವರು ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ‌ ಭದ್ರತಾ ವೈಫಲ್ಯ ಆಗಿದೆ. ಆತ ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಹೊಡೆದಿದ್ದಾರೆ. ಹೀಗಾದರೆ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ ಅಲ್ಲಿ? ಸಂಸತ್‌ನಲ್ಲಿ (parliament house) ಒಳಗೆ ಹೋಗಲು ಹತ್ತಾರು ಪ್ರಕ್ರಿಯೆ ಇದೆ. ಮಂತ್ರಿ, ಎಂಎಲ್‌ಗಳು ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆ ಇವೆ. ಹಾಗಾದರೆ ಆ ಹುಡುಗರು ಹೇಗೆ ಒಳಗೆ ಹೋದರು? ರಾಜ್ಯದ ಮುಖ್ಯಮಂತ್ರಿಗಳೇ ಪ್ರಧಾನಿ ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆ ಇವೆ. ಸಚಿವನಾಗಿ ನಾನೇ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವರು ಹೇಗೆ ಹೋದರು? ಅಂತಾ ಅವರು ಪ್ರಶ್ನಿಸಿದ್ದಾರೆ.

ಅನಿಲ್ ಕುಮಾರ್ ಪಾಟೀಲ್ ಮನೆಯಲ್ಲಿ ಜಮೀರ್ ಅಹ್ಮದ್: ಪಾಟೀಲ್ ಇತ್ತೀಚಿಗೆ ತಮ್ಮ ಮಗ ಅರ್ಜುನ್ ಮದುವೆ ಕಾರ್ಯ ನೆರವೇರಿಸಿದ್ದರು. ಜಮೀರ್ ಅವರಿಗೆ ಲಗ್ನದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲವಂತೆ. ಹಾಗಾಗಿ, ಇಂದು ಪಾಟೀಲ್ ಮನೆಗೆ ಭೇಟಿ ನೀಡಿ ನವವಿವಾಹಿತರಿಗೆ ಶುಭ ಹಾರೈಸುವುದರ ಜೊತೆಗೆ ವರನಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಜನರು ಬದಲಾವಣೆ ಬಯಸಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಜನ ಈಗ ತೀರ್ಮಾನ ತೆಗೆದುಕೊಂಡು ಆಗಿದೆ. ರಾಜ್ಯದಲ್ಲಿ ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಮೂರು ಕ್ಷೇತ್ರದಲ್ಲಿ ಮುಸಲ್ಮಾನರಿಗೆ ಟಿಕೆಟ್ ಕೇಳಿದ್ದೇವೆ. ಬೆಂಗಳೂರು ಸೆಂಟ್ರಲ್, ಹಾವೇರಿ, ಬೀದರ್ ಕ್ಷೇತ್ರದ ಟಿಕೆಟ್ ಕೇಳಿದ್ದೇವೆ ಎಂದು ಹೇಳಿದರು.

Follow us on