ಹೆಲಿಕಾಪ್ಟರ್ನಲ್ಲಿ ಕೊಪ್ಪಳಕ್ಕೆ ಬಂದ ಸಿದ್ದರಾಮಯ್ಯ ನೋಡಲು ಹೆಲಿಪ್ಯಾಡ್ಗೆ ನುಗ್ಗಿದ ಜನ! ವಿಡಿಯೋ ಇಲ್ಲಿದೆ
ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ಮೂಲಕ ಕೊಪ್ಪಳ ಜಿಲ್ಲೆಯ ಕಾರಟಗಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ನೋಡಲು ಜನರು ಮುಗಿಬಿದ್ದರು.
ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೊಪ್ಪಳ ಜಿಲ್ಲೆಯ ಕಾರಟಗಿ ಕ್ಷೇತ್ರಕ್ಕೆ ಆಗಮಿಸಿದರು. ಕಾಂಗ್ರೆಸ್ ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದು, ಇವರನ್ನು ನೋಡಲು ಅಭಿಮಾನಿಗಳು ಏಕಾಏಕಿ ಹೆಲಿಪ್ಯಾಡ್ಗೆ ನುಗ್ಗಿದ್ದಾರೆ. ಒಂದೆಡೆ ಹೆಲಿಕ್ಯಾಪ್ಟರ್ ಆನ್ ಆಗಿದ್ದರೂ ನುಗ್ಗಿದ ಜನರನ್ನು ಕಂಡು ಹೆಲಿಕಾಪ್ಟರ್ ಪೈಲಟ್ ಆತಂಕಗೊಂಡರೆ, ಇನ್ನೊಂದೆಡೆ, ಹೆಲಿಪ್ಯಾಡ್ಗೆ ನುಗ್ಗಿದವರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವಂತಾಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 15, 2023 06:58 PM
Latest Videos