ಹೆಲಿಕಾಪ್ಟರ್​ನಲ್ಲಿ ಕೊಪ್ಪಳಕ್ಕೆ ಬಂದ ಸಿದ್ದರಾಮಯ್ಯ ನೋಡಲು ಹೆಲಿಪ್ಯಾಡ್​ಗೆ ನುಗ್ಗಿದ ಜನ! ವಿಡಿಯೋ ಇಲ್ಲಿದೆ

|

Updated on: Apr 15, 2023 | 6:58 PM

ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ಮೂಲಕ ಕೊಪ್ಪಳ ಜಿಲ್ಲೆಯ ಕಾರಟಗಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ನೋಡಲು ಜನರು ಮುಗಿಬಿದ್ದರು.

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೊಪ್ಪಳ ಜಿಲ್ಲೆಯ ಕಾರಟಗಿ ಕ್ಷೇತ್ರಕ್ಕೆ ಆಗಮಿಸಿದರು. ಕಾಂಗ್ರೆಸ್ ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯ ಹೆಲಿಕಾಪ್ಟರ್​​ ಮೂಲಕ ಆಗಮಿಸಿದ್ದು, ಇವರನ್ನು ನೋಡಲು ಅಭಿಮಾನಿಗಳು ಏಕಾಏಕಿ ಹೆಲಿಪ್ಯಾಡ್​ಗೆ ನುಗ್ಗಿದ್ದಾರೆ. ಒಂದೆಡೆ ಹೆಲಿಕ್ಯಾಪ್ಟರ್ ಆನ್ ಆಗಿದ್ದರೂ ನುಗ್ಗಿದ ಜನರನ್ನು ಕಂಡು ಹೆಲಿಕಾಪ್ಟರ್​ ಪೈಲಟ್ ಆತಂಕಗೊಂಡರೆ, ಇನ್ನೊಂದೆಡೆ, ಹೆಲಿಪ್ಯಾಡ್​ಗೆ ನುಗ್ಗಿದವರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವಂತಾಯಿತು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಮಿಸ್: ಹೇಳದೆ ಕೇಳದೆ ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಿದೆ: ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್

ಮತ್ತಷ್ಟು ವಿಡಿಯೋ ಸ್ಟೋರಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 15, 2023 06:58 PM