AI Impact Summit: ಎಐ ಪ್ರಯೋಜನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್

Updated on: Feb 19, 2026 | 11:12 AM

ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ಆರಂಭಗೊಂಡಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಗೆ ಸಾಕ್ಷಿಯಾಗಿದ್ದಾರೆ. ಈ ಸದರ್ಭದಲ್ಲಿ ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಎಐನಿಂದ ಪ್ರಯೋನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯವನ್ನು ಕೂಡ ಕಂಡುಕೊಳ್ಳಬೇಕೆಂದರು. ತಂತ್ರಜ್ಞಾನದ ಿಜಾದ ಮೌಲ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪುವುದರಲ್ಲಿದೆ.

ನದೆಹಲಿ, ಫೆಬ್ರವರಿ 19:ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ಆರಂಭಗೊಂಡಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಗೆ ಸಾಕ್ಷಿಯಾಗಿದ್ದಾರೆ. ಈ ಸದರ್ಭದಲ್ಲಿ ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಎಐನಿಂದ ಪ್ರಯೋನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯವನ್ನು ಕೂಡ ಕಂಡುಕೊಳ್ಳಬೇಕೆಂದರು. ತಂತ್ರಜ್ಞಾನದ ಿಜಾದ ಮೌಲ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪುವುದರಲ್ಲಿದೆ.

ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು, ಅದನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ಮತ್ತು ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸರ್ಕಾರದ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು.ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ನಾವು ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್ ಅನ್ನು ರಚಿಸಿದ್ದೇವೆ, ಅಲ್ಲಿ ನಾವು ನಮ್ಮ ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ 38,000 GPU ಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದೇವೆ.

ಈ ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್‌ಗೆ ನಾವು ಇನ್ನೂ 20,000 GPU ಗಳನ್ನು ಸೇರಿಸುತ್ತೇವೆ ಎಂದರು. 2026 ರ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ 110 ಕ್ಕೂ ಹೆಚ್ಚು ದೇಶಗಳು, 20 ರಾಷ್ಟ್ರಗಳು, 30 ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು 500ಕ್ಕೂ ಅಧಿಕ ಜಾಗತಿಕ ನಾಯಕರು ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 19, 2026 10:22 AM