ದಶಕಗಳ ಸಂಪರ್ಕದ ಕನಸು ಸಾಕಾರ: ಅಸ್ಸಾಂ ರೈಲ್ವೆಗೆ ಪೂರ್ಣ ವಿದ್ಯುತ್ ಸ್ಪರ್ಶ, ಜ್ಯೋತಿರಾದಿತ್ಯ ಸಿಂಧಿಯಾ ಮೆಚ್ಚುಗೆ

Updated on: Sep 15, 2026 | 11:59 AM

ಅಸ್ಸಾಂ ರಾಜ್ಯದ ಸಮಗ್ರ ಬ್ರಾಡ್‌ಗೇಜ್ ರೈಲು ಜಾಲವು ಶೇಕಡಾ100 ರಷ್ಟು ಸಂಪೂರ್ಣ ವಿದ್ಯುದ್ದೀಕರಣಗೊಂಡಿರುವುದನ್ನು ಕೇಂದ್ರ ಈಶಾನ್ಯ ಪ್ರದೇಶ ಅಭಿವೃದ್ಧಿ ಹಾಗೂ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂ ರೈಲ್ವೆ ಜಾಲದ ಶೇ.100 ರಷ್ಟು ವಿದ್ಯುದ್ದೀಕರಣವು ‘ರೈಸಿಂಗ್ ನಾರ್ತ್‌ಈಸ್ಟ್’ ಅಭಿವೃದ್ಧಿ ಪರ್ವದ ಮಹತ್ವದ ಮೈಲಿಗಲ್ಲು

ಗುವಾಹಟಿ, ಸೆಪ್ಟೆಂಬರ್ 15: ಅಸ್ಸಾಂ ರಾಜ್ಯದ ಸಮಗ್ರ ಬ್ರಾಡ್‌ಗೇಜ್ ರೈಲು ಜಾಲವು ಶೇ.100 ರಷ್ಟು ಸಂಪೂರ್ಣ ವಿದ್ಯುದ್ದೀಕರಣಗೊಂಡಿರುವುದನ್ನು ಕೇಂದ್ರ ಈಶಾನ್ಯ ಪ್ರದೇಶ ಅಭಿವೃದ್ಧಿ ಹಾಗೂ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂ ರೈಲ್ವೆ ಜಾಲದ ಶೇ.100 ರಷ್ಟು ವಿದ್ಯುದ್ದೀಕರಣವು ‘ರೈಸಿಂಗ್ ನಾರ್ತ್‌ಈಸ್ಟ್’ ಅಭಿವೃದ್ಧಿ ಪರ್ವದ ಮಹತ್ವದ ಮೈಲಿಗಲ್ಲು. ಒಂದು ಕಾಲದಲ್ಲಿ ಕಠಿಣ ಭೂಪ್ರದೇಶದ ಕಾರಣಕ್ಕೆ ರೈಲು ಸಂಪರ್ಕವೇ ಮರೀಚಿಕೆಯಾಗಿದ್ದ ಈ ಭಾಗದಲ್ಲಿ, ಪರಿಸರಸ್ನೇಹಿ ಮತ್ತು ಸುಸ್ಥಿರ ಸಂಪರ್ಕ ಸಾಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈಗ ಸ್ಥಿರವಾಗಿ ಸಾಕಾರಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯಿಂದಾಗಿ ಡೀಸೆಲ್ ಎಂಜಿನ್‌ಗಳ ಬದಲಿಗೆ ಪರಿಸರಸ್ನೇಹಿ ವಿದ್ಯುತ್ ರೈಲುಗಳು ಸಂಚರಿಸಲಿದ್ದು, ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ತಗ್ಗಲಿದೆ. ಅಲ್ಲದೆ ಸರಕು ಸಾಗಣೆ ಹಾಗೂ ಪ್ರಯಾಣಿಕರ ರೈಲುಗಳ ವೇಗ ಹೆಚ್ಚಾಗಲಿದ್ದು, ಅಸ್ಸಾಂ ಜೊತೆಗೆ ಈಶಾನ್ಯ ಭಾರತದ ಇತರೆ ರಾಜ್ಯಗಳ ವ್ಯಾಪಾರ-ವಹಿವಾಟು ಹಾಗೂ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ಸಿಗಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More