New police commissioner: ಬೆಂಗಳೂರು ನಗರ ಹೊಸ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ್ ಅಧಿಕಾರ ಸ್ವೀಕಾರ
ನೂತನ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ್ ಅಧಿಕಾರ ಸ್ವೀಕಾರ

New police commissioner: ಬೆಂಗಳೂರು ನಗರ ಹೊಸ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ್ ಅಧಿಕಾರ ಸ್ವೀಕಾರ

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2023 | 5:04 PM

ನಗರದ ಜನತೆಗೆ ಪೊಲೀಸ್ ವ್ಯವಸ್ಥೆ ಮೇಲೆ ಭಾರೀ ವಿಶ್ವಾಸವಿದೆ ಮತ್ತು ಅದಕ್ಕೆ ಧಕ್ಕೆಯಾಗದ ಹಾಗೆ ಕಾರ್ಯನಿರ್ವಹಿಸುವುದಾಗಿ ದಯಾನಂದ್ ಹೇಳಿದರು.

ಬೆಂಗಳೂರು: ನಗರದ ಹೊಸ ಪೊಲೀಸ್ ಕಮೀಷನರ್ ಆಗಿ ಹಿರಿಯ ಪೊಲೀಸ್ ಅಧಿಕಾರಿ ಬಿ ದಯಾನಂದ್ (B Dayanand) ಇಂದು ಜವಾಬ್ದಾರಿ ವಹಿಸಿಕೊಂಡರು. ಸ್ಥಾನದಿಂದ ನಿರ್ಗಮಿಸಿದ ಸಿಹೆಚ್ ಪ್ರತಾಪ್ ರೆಡ್ಡಿ (CH Pratap Reddy) ಅಧಿಕಾರ ವರ್ಗಾವಣೆ ಸೂಚಕವಾಗಿ ಬೇಟನ್ ಅನ್ನು ಹೊಸ ಆಯುಕ್ತರಿಗೆ ಹಸ್ತಾಂತರಿಸಿದರು. ಅಧಿಕಾರಹಿಸಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದಯಾನಂದ್, ನಗರದ ಜನತೆಗೆ ಪೊಲೀಸ್ ವ್ಯವಸ್ಥೆ ಮೇಲೆ ಭಾರೀ ವಿಶ್ವಾಸವಿದೆ ಮತ್ತು ಅದಕ್ಕೆ ಧಕ್ಕೆಯಾಗದ ಹಾಗೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಸೈಬರ್ ಕ್ರೈಮ್ (Cyber crime) ನಿಯಂತ್ರಣ ಮತ್ತು ನಗರದಲ್ಲಿ ಜನರ ತಲೆಬಿಸಿ ಮಾಡುವ ಟ್ರಾಫಿಕ್ ದುರವಸ್ಥೆಯನ್ನು ಸುಗಮಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಕಮೀಷನರ್ ದಯಾನಂದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.