ಬಾಗಲಕೋಟೆ: ಹಾಸ್ಟೆಲ್​ನಿಂದ ಕಾಣೆಯಾಗಿದ್ದ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಶವ ರೈಲ್ವೆ ಬ್ರಿಡ್ಜ್ ಕೆಳಗೆ ಪತ್ತೆ

Edited By: ಸಾಧು ಶ್ರೀನಾಥ್​

Updated on: Sep 16, 2023 | 2:23 PM

ಬಾಗಲಕೋಟೆ ನಗರದ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಕೆಳಗೆ ಅನುಮಾಮಾಸ್ಪದ ಸ್ಥಿತಿಯಲ್ಲಿ‌ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ಮೂಲದ ಯುವತಿ, ಸುಮನಾ ಮನೋಹರ್ ಪತ್ತಾರ (೨೨) ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಬಾಗಲಕೋಟೆ ನಗರದ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಕೆಳಗೆ ಅನುಮಾಮಾಸ್ಪದ ಸ್ಥಿತಿಯಲ್ಲಿ‌ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿಯ ಶವ (dead body) ಪತ್ತೆಯಾಗಿದೆ. ಬಾಗಲಕೋಟೆ (Bagalkote) ಜಿಲ್ಲೆ ಇಳಕಲ್ ಮೂಲದ ಯುವತಿ, ಸುಮನಾ ಮನೋಹರ್ ಪತ್ತಾರ (೨೨) ಸಾವನ್ನಪ್ಪಿರುವ ವಿದ್ಯಾರ್ಥಿನಿ. ಬ್ರಿಡ್ಜ್ ಕಳಗೆ ಮುಳ್ಳುಕಂಟಿಯಲ್ಲಿ ಶವ ಪತ್ತೆಯಾಗಿದೆ.

ಸುಮನ್ ಬಾಗಲಕೋಟೆ ಕುಮಾರೇಶ್ವರ್ ಮೆಡಿಕಲ್‌ ಕಾಲೇಜ್ ನಲ್ಲಿ ಫಿಜಿಯೋತೆರಪಿ ೩ ನೇ ವರ್ಷ ವ್ಯಾಸಂಗ ಮಾಡ್ತಿದ್ದಳು. ಎರಡು ದಿನಗಳ ಹಿಂದೆ ಬೆಳಗ್ಗೆ ಹಾಸ್ಟೆಲ್ (hostel) ನಿಂದ ಕಾಣೆಯಾಗಿದ್ದ (missing) ವಿದ್ಯಾರ್ಥಿನಿ. ಯುವತಿಯ ಪೋಷಕರು ಹಾಸ್ಟೆಲ್ ನಿಂದ ಮಗಳು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು. ಸ್ಥಳಕ್ಕೆ ಬಾಗಲಕೋಟೆ ರೈಲ್ವೆ ಹಾಗೂ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 16, 2023 02:20 PM
Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More