Video: ಹಿಂದೂಗಳು ದುರ್ಬಲರು, ಕೋಲ್ಕತ್ತಾಗೆ ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ ಎಂದ ಬಾಂಗ್ಲಾ ಇಸ್ಲಾಮಿಸ್ಟ್​

Updated on: May 13, 2025 | 12:07 PM

ಹಿಂದೂಗಳು ದೈಹಿಕವಾಗಿ ದುರ್ಬಲರು, ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸಿ ಎಂದು ಬಾಂಗ್ಲಾದೇಶದ ಇಸ್ಲಾಮಿಸ್ಟ್​ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕ್ಲಿಪ್​ನಲ್ಲಿ ತಾಲಿಬಾನ್ ಶೈಲಿಯಲ್ಲಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಆತ ಹೇಳಿಕೊಳ್ಳುತ್ತಾನೆ. ವಿಡಿಯೋದಲ್ಲಿ ಏನಿದೆ? ವಾಯ್ಸ್​ ಆಫ್ ಬಾಂಗ್ಲಾದೇಶಿ ಹಿಂದೂಸ್​ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಂಗ್ಲಾದೇಶ ಸೇನೆ ಈಗ ಹೋಗಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಿ ಎಂದು ಹೇಳಿದರೆ ನಾನು ಒಂದು ಯೋಜನೆಯನ್ನು ರೂಪಿಸುತ್ತೇನೆ 70 ಫೈಟರ್​ ಜೆಟ್​ಗಳನ್ನು ಬಳಸುವುದನ್ನು ಮರೆತುಬಿಡಿ,

ಬಾಂಗ್ಲಾ, ಮೇ 13: ಹಿಂದೂಗಳು ದೈಹಿಕವಾಗಿ ದುರ್ಬಲರು, ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ  ಎಂದು ಬಾಂಗ್ಲಾದೇಶದ ಇಸ್ಲಾಮಿಸ್ಟ್ ಹೇಳಿರುವ​ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕ್ಲಿಪ್​ನಲ್ಲಿ ತಾಲಿಬಾನ್ ಶೈಲಿಯಲ್ಲಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಆತ ಹೇಳಿಕೊಳ್ಳುತ್ತಾನೆ.

ವಿಡಿಯೋದಲ್ಲಿ ಏನಿದೆ?
ವಾಯ್ಸ್​ ಆಫ್ ಬಾಂಗ್ಲಾದೇಶಿ ಹಿಂದೂಸ್​ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಂಗ್ಲಾದೇಶ ಸೇನೆ ಈಗ ಹೋಗಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಿ ಎಂದು ಹೇಳಿದರೆ ನಾನು ಒಂದು ಯೋಜನೆಯನ್ನು ರೂಪಿಸುತ್ತೇನೆ 70 ಫೈಟರ್​ ಜೆಟ್​ಗಳನ್ನು ಬಳಸುವುದನ್ನು ಮರೆತುಬಿಡಿ, ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ನಾನು ಏಳು ವಿಮಾನಗಳನ್ನು ಸಹ ಬಳಸುವುದಿಲ್ಲ. ನನಗೆ 70 ವಿಮಾನಗಳು ಏಕೆ ಬೇಕು. ಅಲ್ಲಿ ಯಾರು ವಾಸಿಸುತ್ತಾರೆಂದು ನನಗೆ ತಿಳಿದಿದೆ.

ಪ್ರತಿಮೆಗಳನ್ನು ಪೂಜಿಸುವ ಜನರು, ಅವರು ದೈಹಿಕವಾಗಿ ಎಷ್ಟು ದುರ್ಬಲರು ಎಂದು ನನಗೆ ತಿಳಿದಿದೆ. ನಿಮಗೆ ಈ ವಿಷಯಗಳು ತಿಳಿದಿಲ್ಲದಿದ್ದರೆ, ನೀವು ಮುಸ್ಲಿಂ ಕಮಾಂಡರ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಗ್ರಹಾರಾಧಕರು ರಕ್ತವನ್ನು ನೋಡಿ ಭಯಭೀತರಾಗುತ್ತಾರೆ ಎಂದು ಇಸ್ಲಾಮಿಸ್ಟ್ ಹೇಳಿಕೊಂಡಿದ್ದಾನೆ. ಆದ್ದರಿಂದ, ಬಾಂಗ್ಲಾದೇಶ ಸೈನ್ಯವು ಅವನಿಗೆ ಅವಕಾಶ ನೀಡಿದರೆ ಕೋಲ್ಕತ್ತಾಗೆ ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸಲು ಸಿದ್ಧನಿದ್ದೇನೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 13, 2025 12:03 PM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More