Assembly Session: ಕೆಎನ್ ರಾಜಣ್ಣರಿಂದ ಕಾಲೆಳಿಸಿಕೊಂಡ ಬಸನಗೌಡ ಯತ್ನಾಳ್ ಮತ್ತೊಮ್ಮೆ ಸಿದ್ದರಾಮಯ್ಯರ ಮಿಮಿಕ್ರಿ ಮಾಡಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2023 | 1:57 PM

ಕಾಂಗ್ರೆಸ್ ಸದಸ್ಯರೊಬ್ಬರು, ರಾಜ್ಯಕ್ಕೆ ದಕ್ಕಬೇಕಾದ ಜಿಎಸ್ ಟಿ ಪಾಲನ್ನು ಕೇಳೋದು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ಯತ್ನಾಳ್ ಗೆ ಹೇಳುತ್ತಾರೆ.

ಬೆಂಗಳೂರು: ವಿಧಾನ ಸಭೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆಯದಿರುವುದು ಕಳವಳಕಾರಿ ಅಂಶವಾಗಿದೆ. ಆಡಳಿತ ಪಕ್ಷದ ನಾಯಕರನ್ನು ವಿರೋಧ ಪಕ್ಷದ ನಾಯಕರು ಟೀಕಿಸುವುದು, ವಿರೋಧ ಪಕ್ಷ ಸದಸ್ಯರ ಟೀಕೆಗಳಿಗೆ ಆಡಳಿತ ಪಕ್ಷದವರು ಕೆರಳುವುದು ಸದನದ ಕಾರ್ಯಕಲಾಪಗಳ ಪ್ರಮುಖ ಅಂಶಗಳಾಗಿವೆ. ಸದನದಲ್ಲಿ ಇಂದು ಸಚಿವ ಕೆಎನ್ ರಾಜಣ್ಣ (KN Rajanna) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನೀಡಿದ ಭರವಸೆ ಬಗ್ಗೆ ಮಾತಾಡಿದಾಗ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಪ್ರಧಾನಿ ಹೇಳಿದ ಮಾತಿನ ಬಗ್ಗೆ ನಿಮ್ಮಲ್ಲಿ ದಾಖಲೆ ಇದ್ದರೆ ತೋರಿಸಿ ನಾವು ಅವರಲ್ಲಿಗೆ ಹೋಗಿ ಕೇಳುತ್ತೇವೆ, ನಮ್ಮಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ, ಎನ್ನುತ್ತಾರೆ. ಅದಕ್ಕೆ ಕಾಂಗ್ರೆಸ್ ಸದಸ್ಯರೊಬ್ಬರು, ರಾಜ್ಯಕ್ಕೆ ದಕ್ಕಬೇಕಾದ ಜಿಎಸ್ ಟಿ ಪಾಲನ್ನು ಕೇಳೋದು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ಯತ್ನಾಳ್ ಗೆ ಹೇಳುತ್ತಾರೆ. ರಾಜಣ್ಣ ಪುನಃ ಎದ್ದುನಿಂತು, ಯತ್ನಾಳ್ ಅವರೇ, ನೀವು ಪ್ರಧಾನಿಯವರನ್ನು, ಯಡಿಯೂರಪ್ಪರವರನ್ನು ಸಮರ್ಥನೆ ಮಾಡಿಕೊಂಡರೂ ನಿಮ್ಮನ್ನು ವಿರೋಧ ಪಕ್ಷದ ನಾಯಕ ಮಾಡೋದಿಲ್ಲ ಅನ್ನುತ್ತಾರೆ. ಆಗ ಯತ್ನಾಳ್ ಎದ್ದು ನಿಂತು, ಮುಖ್ಯಮಂತ್ರಿ ನೀಡಿದ ಗೃಹ ಜ್ಯೋತಿ ಗ್ಯಾರಂಟಿಯನ್ನು ಮಿಮಿಕ್ರಿ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.