Video: ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ, ದಿಕ್ಕಾಪಾಲಾಗಿ ಓಡಿದ ಜನ

Updated on: Apr 21, 2026 | 3:26 PM

ಜೋಧ್​ಪುರದ ಮಂಡೋರ್ ಪಾರ್ಕ್​​ನಲ್ಲಿ ಜೇನು ನೊಣಗಳು ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್‌ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಐತಿಹಾಸಿಕ ಸೌಂದರ್ಯವನ್ನು ಸವಿಯುತ್ತಿದ್ದರು. ಆದರೆ, ದೊಡ್ಡ ಆಪತ್ತು ಕಾದಿದೆ ಎಂದು ಯಾರೂ ಊಹಿಸಿರಲಿಲ್ಲ.

ಜೋಧ್​ಪುರ, ಏಪ್ರಿಲ್ 21: ಜೋಧ್​ಪುರದ ಮಂಡೋರ್ ಪಾರ್ಕ್​​ನಲ್ಲಿ ಜೇನು ನೊಣಗಳು ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್‌ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಐತಿಹಾಸಿಕ ಸೌಂದರ್ಯವನ್ನು ಸವಿಯುತ್ತಿದ್ದರು. ಆದರೆ, ದೊಡ್ಡ ಆಪತ್ತು ಕಾದಿದೆ ಎಂದು ಯಾರೂ ಊಹಿಸಿರಲಿಲ್ಲ.

ಉದ್ಯಾನದ ಮುಖ್ಯ ದ್ವಾರದ ಬಳಿ ಇದ್ದ ಬೃಹತ್ ಜೇನುಗೂಡಿನಿಂದ ಸಾವಿರಾರು ಜೇನುನೊಣಗಳು ಒಮ್ಮೆಗೆ ಹೊರಬಂದವು. ನೋಡುನೋಡುತ್ತಿದ್ದಂತೆಯೇ ದಾಳಿ ಶುರು ಮಾಡಿದ್ದವು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಜನರು ತಮ್ಮ ಕೈಯಲ್ಲಿದ್ದ ಬ್ಯಾಗ್, ಕೊಡೆಗಳನ್ನು ಎಸೆದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಸಣ್ಣ ಮಕ್ಕಳು ಮತ್ತು ವೃದ್ಧರು ಆತಂಕದಿಂದ ಕಿರುಚುತ್ತಿದ್ದರು. ಇಡೀ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಜೇನುನೊಣಗಳ ಗುಂಪು ನೂರಾರು ಪ್ರವಾಸಿಗರನ್ನು ಬೆನ್ನಟ್ಟಿತು, ಹಲವರಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 21, 2026 01:00 PM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More