ಎಂಟು ಹೆಣ್ಣುಮಕ್ಕಳ ತಂದೆಯಾಗಿರುವ ನನಗೆ ಪ್ರವೀಣ್ ಪತ್ನಿಯ ನೋವು ಅರ್ಥವಾಗುತ್ತದೆ: ಇಬ್ರಾಹಿಂ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 01, 2022 | 12:53 PM

ನಾವೆಷ್ಟೇ ಸಾಂತ್ವನ ಹೇಳಿದರೂ ಆಕೆ ಕಳೆದುಕೊಂಡಿರುವುದನ್ನು ವಾಪಸ್ಸು ತಂದುಕೊಡಲಾಗದು, ಆಕೆ ಪಡುತ್ತಿರುವ ಸಂಕಟ ಕಂಡು ಕರುಳು ಕಿತ್ತುಬಂದಾಗುತ್ತದೆ, ಎಂದು ಇಬ್ರಾಹಿಂ ಹೇಳಿದರು.

ಮಂಗಳೂರು: ಮೃತ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಮನೆಗೆ ಭೇಟಿ ನೀಡಿದ ಬಳಿಕ ಜೆಡಿ(ಎಸ್) ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಮಾಧ್ಯಮಾದವರೊಂದಿಗೆ ಮಾತಾಡಿದರು. ಪ್ರವೀಣ್ ಪತ್ನಿಯ ಜೊತೆ ಮಾತಾಡಿದೆ, ನಾನು 8 ಹೆಣ್ಣು ಮಕ್ಕಳ ತಂದೆಯಾಗಿರುವುದರಿಂದ ಆ ಹೆಣ್ಣುಮಗುವಿನ ಸಂಕಟ ಅರ್ಥಮಾಡಿಕೊಳ್ಳಬಲ್ಲೆ. ನಾವೆಷ್ಟೇ ಸಾಂತ್ವನ ಹೇಳಿದರೂ ಆಕೆ ಕಳೆದುಕೊಂಡಿರುವುದನ್ನು ವಾಪಸ್ಸು ತಂದುಕೊಡಲಾಗದು, ಆಕೆ ಪಡುತ್ತಿರುವ ಸಂಕಟ ಕಂಡು ಕರುಳು ಕಿತ್ತುಬಂದಾಗುತ್ತದೆ, ಎಂದು ಇಬ್ರಾಹಿಂ ಹೇಳಿದರು.

Loading...
Unable to load recommendations.
Follow Us
TV9 Web

TV9 Kannada

Read More