PM Narendra Modi to visit Belagavi: ಸೋಮವಾರ ಬರಲಿದ್ದಾರೆ ಪ್ರಧಾನಿ, ಸ್ವಾಗತಕ್ಕೆ ಯುದ್ಧೋಪಾದಿಯಲ್ಲಿ ಸಿದ್ಧತೆಗಳು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 25, 2023 | 10:41 AM

ನಗರದಲ್ಲಿ 8 ಕಿಮೀಗಳ ಉದ್ದ ರೋಡ್ ಶೋ ಮೋದಿಯವರು ನಡೆಸಲಿದ್ದು ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಕೇಸರಿ ಧ್ವಜ, ಮೋದಿಯವರ ಪೋಸ್ಟರ್ ಗಳನ್ನು ನೆಡುತ್ತಿರುವ ದೃಶ್ಯವನ್ನು ನೋಡಬಹುದು.

ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೆಚ್ಚು ಕಡಿಮೆ ಒಂದೂವರೆ ತಿಂಗಳಲ್ಲಿ ಪ್ರಧಾನಿ ಮೋದಿ ನಾಲ್ಕನೇ ಬಾರಿ ಕರ್ನಾಟಕಕ್ಕೆ (Karnataka) ಬರುತ್ತಿರುವುದು ಯಾಕೆ ಅಂತ ನಮಗೆಲ್ಲ ಗೊತ್ತಿರುವ ಸಂಗತಿಯೇ. ಮೊದಲು ಹುಬ್ಬಳ್ಳಿ-ಧಾರವಾಡ, ಅಮೇಲೆ ಯಾದಗಿರಿ-ಕಲಬುರಗಿ, ನಂತರ ತುಮಕೂರು ಮತ್ತು ಈಗ ಸಿಹಿತಿಂಡಿ ಕುಂದಾಗೆ ಖ್ಯಾತವಾಗಿರುವ ಬೆಳಗಾವಿಗೆ ಪ್ರಧಾನಿಗಳ ಆಗಮನ! ಫೆಬ್ರುವರಿ 27 ರಂದು ಆಗಮಿಸಲಿರುವ ಪ್ರಧಾನಿಯವರ ಸ್ವಾಗತಕ್ಕೆ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ನಗರದಲ್ಲಿ 8 ಕಿಮೀಗಳ ಉದ್ದ ರೋಡ್ ಶೋ (road show) ಅನ್ನು ಮೋದಿಯವರು ನಡೆಸಲಿದ್ದು ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಕೇಸರಿ ಧ್ವಜ, ಮೋದಿಯವರ ಪೋಸ್ಟರ್ ಗಳನ್ನು ನೆಡುತ್ತಿರುವ ದೃಶ್ಯವನ್ನು ನೋಡಬಹುದು. ಸುಮಾರು 10,000 ಮಹಿಳೆಯರು ತಲೆಗೆ ಕೇಸರಿ ಪೇಟಾ ಸುತ್ತಿ ಪ್ರಧಾನಿಗಳನ್ನು ಸ್ವಾಗತಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 25, 2023 10:40 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.