ಬಿಗ್​ಬಾಸ್​ಗೆ ಹೋಗ್ತಾರಾ ‘ಬೆಳ್ಳುಳ್ಳಿ ಕಬಾಬ್’ ಚಂದ್ರು

Updated on: Feb 10, 2024 | 11:31 PM

Bellulli Kabab: ಬೆಳ್ಳುಳ್ಳಿ ಕಬಾಬ್ ಹಾಗೂ ರಾಹುಲ್ ಟ್ರೆಂಡ್​ ಅನ್ನು ಪ್ರಾರಂಭಿಸಿದ ಹೋಟೆಲ್ ಉದ್ಯಮಿ ಚಂದ್ರು ಟಿವಿ9 ಜೊತೆ ಮಾತನಾಡುತ್ತಾ, ಬಿಗ್​ಬಾಸ್ ಅವಕಾಶ ಬಂದರೆ ಹೋಗುತ್ತಾರೆಯೇ ಎಲ್ಲವೇ ಎಂಬ ಬಗ್ಗೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ‘ಏನಿಲ್ಲ ಏನಿಲ್ಲ’ ಜೊತೆಗೆ ‘ಬೆಳ್ಳುಳ್ಳಿ ಕಬಾಬ್’ (Bellulli Kabab) ಹಾಗೂ ‘ರಾಹುಲ್ಲ’ ಸಹ ಸಖತ್ ಜನಪ್ರಿಯವಾಗಿದ್ದಾರೆ. ಬೆಳ್ಳುಳ್ಳಿ ಕಬಾಬ್ ಹಾಗೂ ರಾಹುಲ್ಲ ಟ್ರೆಂಡ್ ಆಗುವಂತೆ ಮಾಡಿರುವ ಹೋಟೆಲ್ ಉದ್ಯಮಿ ಚಂದ್ರು, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡವರು. ಯಶಸ್ವಿ ಹೋಟೆಲ್ ಉದ್ಯಮಿ ಆಗಿರುವ ಚಂದ್ರು, ಕಳೆದ ಕೆಲ ತಿಂಗಳಿನಿಂದ ಯೂಟ್ಯೂಬ್​ನಲ್ಲಿ ಅಡುಗೆ ರೆಸಿಪಿ ಹಂಚಿಕೊಳ್ಳುತ್ತಿದ್ದರು. ಅವರ ಮಾತಿನ ಶೈಲಿ, ಅಡುಗೆ ಮಾಡುವ ಶೈಲಿ ನೆಟ್ಟಿಗರಿಗೆ ಸಖತ್ ಇಷ್ಟವಾಗಿದೆ. ಇದೀಗ ಚಂದ್ರು ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್​ಬಾಸ್​ಗೆ ಅಥವಾ ಬೇರೆ ಯಾವುದೇ ರಿಯಾಲಿಟಿ ಶೋ ಅಥವಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆತರೆ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More