‘ಓನ್ಲಿ ಇನ್ ನಮ್ಮ ಬೆಂಗಳೂರು’: ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್

Updated on: Jun 24, 2026 | 4:04 PM

ಮುಖ್ಯಾಂಶಗಳು

  • ಆಟೋ ಚಾಲಕನ ಚಾಟ್‌ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರ
  • ಹೊಸ ತಂತ್ರಜ್ಞಾನವನ್ನು ಕಲಿಯಬೇಕು ಎನ್ನುವ ಆಟೋ ಚಾಲಕನ ಉತ್ಸಾಹ
  • ಜ್ಯೋತಿಷ್ಯ ಪುಸ್ತಕವನ್ನು ಬರೆಯಲು ಮುಂದಾದ ಚಾಲಕ

ಬೆಂಗಳೂರಿನ ಆಟೋ ಚಾಲಕರೊಬ್ಬರು ಚಾಟ್‌ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ತಜ್ಞರಂತೆ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಹೊಸ ತಂತ್ರಜ್ಞಾನ ಕಲಿಯುವ ಅವರ ಉತ್ಸಾಹ ಮತ್ತು ಚಾಟ್‌ಜಿಪಿಟಿ ಬಳಸಿ ಜ್ಯೋತಿಷ್ಯ ಪುಸ್ತಕ ಬರೆಯುವ ಯೋಜನೆಯು ನೆಟ್ಟಿಗರಿಗೆ ಸ್ಫೂರ್ತಿ ನೀಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಆಟೋ ಚಾಲಕನ ತಾಂತ್ರಿಕ ಜ್ಞಾನ ಮತ್ತು ಕಲಿಕೆಯ ಕುತೂಹಲ ಎಲ್ಲರ ಮೆಚ್ಚುಗೆ ಗಳಿಸಿದೆ.

ಬೆಂಗಳೂರು, ಜೂ.24: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರು ಮತ್ತು ಅವರ ವಿಶಿಷ್ಟ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತವೆ. ಆದರೆ, ಈ ಬಾರಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಆಟೋ ಚಾಲಕರೊಬ್ಬರ ವಿಡಿಯೋ ನೋಡಿದರೆ ನೀವು ನಿಜಕ್ಕೂ ಅಚ್ಚರಿಪಡುತ್ತೀರಿ! ಹೌದು, ಸಾಮಾನ್ಯ ಆಟೋ ಚಾಲಕರೊಬ್ಬರು ಚಾಟ್‌ಜಿಪಿಟಿ (ChatGPT) ಮತ್ತು ಕೃತಕ ಬುದ್ಧಿಮತ್ತೆ (AI) ಬಗ್ಗೆ ತಜ್ಞರಂತೆ ಮಾತನಾಡಿ ನೆಟ್ಟಿಗರ ಮನಗೆದ್ದಿದ್ದಾರೆ. ಗಗನ್ ಸಾಯಿ ಪ್ರಸಾದ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ರೀಲ್ ಈಗ ಸಖತ್ ವೈರಲ್ ಆಗುತ್ತಿದೆ. ಆಟೋದಲ್ಲಿ ಪ್ರಯಾಣಿಸುವಾಗ ಚಾಲಕನೊಂದಿಗೆ ಆರಂಭವಾದ ಸಾಮಾನ್ಯ ಮಾತುಕತೆ, ನೋಡನೋಡುತ್ತಿದ್ದಂತೆ ಹೈಟೆಕ್ ‘ಚಾಟ್‌ಜಿಪಿಟಿ’ ಚರ್ಚೆಯಾಗಿ ಬದಲಾಯಿತು. ಆಟೋ ಚಾಲಕ ಕೇವಲ ಎಐ ಎಂದರೇನು ಎಂದು ತಿಳಿಯುವುದು ಮಾತ್ರವಲ್ಲದೆ, ಚಾಟ್‌ಜಿಪಿಟಿಯಲ್ಲಿ ಹೇಗೆ ಕಮಾಂಡ್ ಕೊಡಬೇಕು, ಅದರಿಂದ ಏನೆಲ್ಲಾ ಲೈಫ್ ಹ್ಯಾಕ್ಸ್ ಪಡೆದುಕೊಳ್ಳಬಹುದು ಎಂಬುದನ್ನು ಅತ್ಯಂತ ಸುಲಭವಾಗಿ ವಿವರಿಸಿದ್ದಾರೆ. ಈ ಇಡೀ ವಿಡಿಯೋದಲ್ಲಿ ಆಕರ್ಷಕ ಅಂಶವೆಂದರೆ ಹೊಸ ತಂತ್ರಜ್ಞಾನವನ್ನು ಕಲಿಯಬೇಕು ಎನ್ನುವ ಆಟೋ ಚಾಲಕನ ಉತ್ಸಾಹ. ಚಾಟ್‌ಜಿಪಿಟಿಯ ನೆರವು ಪಡೆದುಕೊಂಡು ಶೀಘ್ರದಲ್ಲೇ ತಾವೊಂದು ಜ್ಯೋತಿಷ್ಯ ಪುಸ್ತಕವನ್ನು ಬರೆಯಲು ಯೋಜಿಸುತ್ತಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ಮುಖದಲ್ಲಿದ್ದ ಕಲಿಕೆಯ ಆನಂದ ಮತ್ತು ಕ್ಯೂರಿಯಾಸಿಟಿ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವಂತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More