ನಾಯಿಮರಿ ಎತ್ತಿ ನೆಲಕ್ಕೆ ಬಡಿದು ಕೊಲೆ: ಆರೋಪಿ ಪುಷ್ಪಲತಾ ಅರೆಸ್ಟ್
ಬೆಂಗಳೂರಿನ ಬಾಗಲೂರಿನಲ್ಲಿ ಮನೆ ಕೆಲಸದಾಕೆಯೇ ನಾಯಿಮರಿ ಕೊಂದ ಪ್ರಕರಣ ಸಂಬಂಧ ಆರೋಪಿ ಪುಷ್ಪಲತಾಳನ್ನ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆಕೆಯೇ ಶ್ವಾನವನ್ನು ಕೊಂದಿದ್ದು, ದೃಢಪಟ್ಟ ಹಿನ್ನಲೆ ಅರೆಸ್ಟ್ ಮಾಡಲಾಗಿದೆ. ಆಕೆ ನಾಯಿಯನ್ನು ಕೊಂದಿದ್ದು ಯಾಕೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಬೆಂಗಳೂರು, ನವೆಂಬರ್ 03: ನಗರದ ಬಾಗಲೂರು ವ್ಯಾಪ್ತಿಯಲ್ಲಿ ಮನೆ ಕೆಲಸದಾಕೆಯೇ ಲಿಫ್ಟ್‌ನಲ್ಲಿ ಶ್ವಾನದ ಮರಿಯನ್ನು ಬಡಿದು ಕೊಂದ ಅಮಾನವೀಯ ಘಟನೆ ನಡೆದಿತ್ತು. ಘಟನೆ ಸಂಬಂಧ ಆರೋಪಿ ಪುಷ್ಪಲತಾಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಶ್ವಾನದ ಮಾಲೀಕರಾದ ರಾಶಿಕಾ ನೀಡಿದ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ. ಆರಂಭದಲ್ಲಿ ನಾಯಿ ಸಾವಿನ ಬಗ್ಗೆ ಪುಷ್ಪಲತಾ ಬೇರೆ ಕಥೆ ಹೇಳಿದ್ದಳು. ಅನುಮಾನಗೊಂಡು ಸಿಸಿ ಟಿವಿ ಪರಿಶೀಲಿಸಿದಾಗ ಲಿಫ್ಟ್‌ನಲ್ಲಿ ನಾಯಿ ಮರಿಯನ್ನ ಬಡಿದು ಕೊಂದಿದ್ದು ದೃಢಪಟ್ಟಿತ್ತು. ಪುಷ್ಪಲತಾಳನ್ನು ನಾಯಿಮರಿಯ ಆರೈಕೆಗಾಗಿಯೇ ಮಾಲಕಿ ರಾಶಿಕಾ ಅವರು ನೇಮಿಸಿದ್ದರು. ಇದಕ್ಕಾಗಿ ಆಕೆಗೆ ಮಾಸಿಕ 23,000-25,000 ರೂ. ಸಂಬಳ ಕೂಡ ನೀಡುತ್ತಿದ್ದರು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
